ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದು ದೇವತೆಗಳ ಕುರಿತು ಅವಮಾನಕಾರಿ ಹೇಳಿಕೆ ನೀಡಿದ ಆರೋಪದ ಮೇರೆಗೆ ತೆಲುಗು ಯೂಟ್ಯೂಬರ್ ಅನ್ವೇಶ್ (ನಾ ಅನ್ವೇಷಣ) ವಿರುದ್ಧ ಪೊಲೀಸ್ ದೂರು ದಾಖಲಿಸಲಾಗಿದೆ.
ಪ್ರಪಂಚ ಯಾತ್ರಿಕುಡು (ಪ್ರಪಂಚ ಯಾತ್ರಿ) ಎಂದೇ ಜನಪ್ರಿಯರಾಗಿರುವ ಅನ್ವೇಶ್ ಅವರು ಹಿಂದು ದೇವರುಗಳನ್ನು ಅವಮಾನಿಸಿದ್ದಾರ ಎಂದು ಆರೋಪಿಸಿ ನಟಿ ಮತ್ತು ಭಾರತೀಯ ಜನತಾ ಪಕ್ಷದ ನಾಯಕಿ ಕರಾಟೆ ಕಲ್ಯಾಣಿ ಹೈದರಾಬಾದ್ ನ ಪಂಜಗುಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅನ್ವೇಷ್ ಅವರು ಆಕ್ಷೇಪಾರ್ಹ ವಿಷಯವನ್ನು ಹರಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಇದರ ಪರಿಣಾಮವಾಗಿ, ಪೊಲೀಸರು ಅನ್ವೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಖಮ್ಮಂನ ಖಾನಾಪುರಂ ಹವೇಲಿ ಪೊಲೀಸ್ ಠಾಣೆಯಲ್ಲಿ ಅನ್ವೇಶ್ ವಿರುದ್ಧ ಈಗಾಗಲೇ ಪ್ರಕರಣ ದಾಖಲಾಗಿದೆ.
ಈ ಹಿಂದೆ ಇದೇ ಯೂಟ್ಯೂಬರ್ ಅನ್ವೇಷ್ ಬೆಟ್ಟಿಂಗ್ ಆ್ಯಪ್ ಗಳ ವಿರುದ್ಧ ಧನಿ ಎತ್ತಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿದ್ದರು.

