4 AM ಹೊಸಕೋಟೆ ಬಿರಿಯಾನಿಗೆ ಶಾಕ್‌ಗೆ ಕೊಟ್ಟ ಪೊಲೀಸ್‌, ಇನ್ಮುಂದೆ ರೂಲ್ಸ್‌ ಚೇಂಜ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

4 ಗಂಟೆಗೆ ಸಿಗುವ ಬಿರಿಯಾನಿ ಎಂದೇ ಫೇಮಸ್‌ ಆಗಿರುವ ಹೊಸಕೋಟೆ ಬಿರಿಯಾನಿ ಪ್ರಿಯರಿಗೆ ಶಾಕ್‌ ಆಗಲಿದೆ. ಹೌದು, ಮಾರ್ನಿಂಗ್‌ ಹೊರಟು ಲಾಂಗ್‌ ಡ್ರೈವ್‌ ಮಾಡಿಕೊಂಡು ಹೊಸಕೋಟೆಯಲ್ಲಿ ಬಿಸಿಬಿಸಿ ಬಿರಿಯಾನಿ ತಿನ್ನುತ್ತಿದ್ದ ಯುವಪೀಳಿಗೆಗೆ ಪೊಲೀಸ್‌ ಶಾಕ್‌ ನೀಡಿದ್ದಾರೆ.

4 ಗಂಟೆಗೆ ಹೋಟೆಲ್ ತೆರೆದು ಬಿರಿಯಾನಿ ಮಾರಾಟ ಮಾಡೋದ್ರಿಂದ ಜನರು ಮಧ್ಯಾಹ್ಯ ರಾತ್ರಿ, ನಸುಕಿನ ಮಂಜಿನಲ್ಲಿ ಡ್ರೈವ್ ಮಾಡ್ತಾ ಹೋಟೆಲ್​ಗಳಿಗೆ ಬರ್ತಾರೆ. ಯುವಕರು ಲಾಂಗ್ ಡ್ರೈವ್ ನೆಪದಲ್ಲಿ ಬಿರಿಯಾನಿಗೆ ಕ್ಯೂ ನಿಲ್ತಿದ್ದಾರೆ. ಇದ್ರಿಂದ ಸಮಸ್ಯೆ ಹೆಚ್ಚಾಗಿದೆ ಎಂದು ಮಾಲೀಕರಿಗೆ ಖಾಕಿ ಕ್ಲಾಸ್​ ತೆಗೆದುಕೊಂಡಿದೆ.

ಯುವಕರು ಲಾಂಗ್​ ಡ್ರೈವ್ ಅಂತ ಸ್ಪೀಡ್​​ ಆಗಿ ವಾಹನ ಚಲಿಸೋದ್ರಿಂದ ಅಪಘಾತ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಇನ್ಮುಂದೆ ನೀವು 4 ಗಂಟೆಗೆ ಬಿರಿಯಾನಿ ಹೋಟೆಲ್​ ತೆರೆಯುವಂತಿಲ್ಲ ಎಂದು ಮಾಲೀಕರಿಗೆ ಖಾಕಿ ಖಡಕ್ ಸೂಚನೆ ನೀಡಿದೆ.

ಹೊಸಕೋಟೆ ಬಿರಿಯಾನಿ ಸಖತ್ ಫೇಮಸ್ ಆಗಿದೆ. ದೂರ ದೂರುಗಳಿಂದ ಬೆಳಗ್ಗೆ 4 ಗಂಟೆಗೆ ಮೊದಲೇ ಕ್ಯೂ ನಿಂತು ಮಟನ್ ಬಿರಿಯಾನಿ ತಿಂತಿದ್ರು. ಆದ್ರೀಗ ಮುಂಜಾನೆ ಆರಂಭವಾಗ್ತಿದ್ದ ಬಿರಿಯಾನಿ ಹೋಟೆಲ್​​ ಸಮಯ ಬದಲಾವಣೆ ಆಗಲಿದೆ. 4 ಗಂಟೆಗೆ ಬದಲಿಗೆ 6 ಗಂಟೆಗೆ ಹೋಟೆಲ್​ ತೆರೆಯುವಂತೆ ಪೊಲೀಸರು ಸೂಚನೆ ನೀಡಿದ್ದಾರೆ ಎನ್ನಲಾಗ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!