VIRAL VIDEO | ರೈಲ್ವೆ ನಿಲ್ದಾಣದಲ್ಲಿ ಮಲಗಿದ್ದವರ ಮೇಲೆ ನೀರು ಸುರಿದ ಪೊಲೀಸರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರೈಲಿಗಾಗಿ ಕಾದು ಕುಳಿತ ಪ್ರಯಾಣಿಕರು ಅಲ್ಲೇ ನಿದ್ದೆ ಮಾಡುವುದನ್ನು ನೋಡಿರಬಹುದು, ರೈಲಿಗಾಗಿ ಕಾಯುವ ಸಮಯದಲ್ಲಿ ಸಣ್ಣ ಸುಖನಿದ್ದೆ ಮಾಡುತ್ತಿದ್ದವರ ಮೇಲೆ ಪೊಲೀಸರ ತಣ್ಣನೆಯ ನೀರನ್ನು ಸುರಿದಿದ್ದಾರೆ.

ಬಾಟಲಿಯಲ್ಲಿ ನೀರು ತುಂಬಿಕೊಂಡು ಮಲಗಿದ್ದವರ ಮೇಲೆಲ್ಲಾ ನೀರು ಸುರಿಯುತ್ತಾ ಹೋಗುತ್ತಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ, ನಮ್ಮ ದೇಶದ ಜನರ ಬುದ್ದಿಗೆ ಹಾಗೂ ಮನಸ್ಸಿಗೆ ಏನಾಗಿದೆ? ಈ ರೀತಿ ಜನರ ಮೇಲೆ ನೀರು ಹಾಕೋದು ಸರಿಯಾ? ಎಂದು ಅಶೋಕ್ ಸ್ವೈನ್ ಟ್ವೀಟ್ ಮಾಡಿದ್ದಾರೆ.

ಈ ವಿಡಿಯೋ ಎಲ್ಲಿ ಶೂಟ್ ಆಗಿದ್ದು, ಯಾರು ಮಾಡಿದ್ದು, ಪೊಲೀಸರು ಯಾಕಾಗಿ ಈ ವರ್ತನೆ ತೋರಿದ್ದಾರೆ ಎಂಬ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ.

https://twitter.com/ashoswai/status/1674794115580710923?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!