ಹೊಸದಿಗಂತ ವರದಿ ಸಿರುಗುಪ್ಪ:
ತಾಲೂಕಿನ ತೆಕ್ಕಲಕೋಟೆ ಪಟ್ಟಣದಿಂದ ಸಿರುಗುಪ್ಪ ನಗರದ ಮೂಲಕ ಸಿಂಧನೂರು ಕಡೆಗೆ ಸರಕು ವಾಹನದಲ್ಲಿ ಸಾಗಿಸುತ್ತಿದ್ದ ಅಕ್ರಮ ಪಡಿತರ ಅಕ್ಕಿಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಮಂಗಳವಾರ ಜರುಗಿತು.
ಖಚಿತ ಮಾಹಿತಿ ಪಡೆದ ಆಹಾರ ನಿರೀಕ್ಷಕ ಎಂ.ವಿಜಯಕುಮಾರ್, ಪಿ.ಎಸ್.ಐ. ಪರಶುರಾಮ್ ಮತ್ತು ಪೊಲೀಸ್ ಸಿಬ್ಬಂದಿ ರೂ.೯೩ ಸಾವಿರದ ಮೌಲ್ಯದ ಸುಮಾರು ೩೭.೫೦ ಕ್ವಿಂಟಲ್ ಅಕ್ರಮ ಪಡಿತರವನ್ನು ಅಕ್ಕಿಯನ್ನು ನಗರದ ಎ.ಪಿ.ಎಂ.ಸಿ ಮುಂಭಾಗದಲ್ಲಿ ವಶಪಡಿಕೊಂಡಿದ್ದಾರೆ. ಈ ಕುರಿತು ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



