September 30, 2026
Wednesday, September 30, 2026
spot_img

LIFE | ಟೀಕೆ ಮಾಡ್ತಾರೆ ಅಂತ ಬೇಜಾರ್ ಮಾಡ್ಕೋಬಾರ್ದು, ಅಂಥವರಿಂದಲೇ ನಾವು ಕಲಿಯೋದು

ಜೀವನದಲ್ಲಿ ನಾವು ಏನೇ ಮಾಡಿದರೂ ಟೀಕೆ ಮಾಡುವವರು ಇದ್ದೆ ಇರುತ್ತಾರೆ. ಕೆಲವೊಮ್ಮೆ ಆ ಟೀಕೆಗಳು ನಮ್ಮ ಮನಸ್ಸಿಗೆ ನೋವು ಕೊಡಬಹುದು. “ನಾನು ತಪ್ಪು ಮಾಡಿದ್ದೇನಾ?” ಎಂಬ ಅನುಮಾನ ಕೂಡ ಹುಟ್ಟಬಹುದು. ಆದರೆ ನಿಜವಾಗಿ ನೋಡಿದರೆ, ಪ್ರತಿಯೊಂದು ಟೀಕೆಯಲ್ಲೂ ಒಂದು ಪಾಠ ಅಡಗಿರುತ್ತೆ.

ಯಾರಾದರೂ ನಮ್ಮ ಕೆಲಸವನ್ನು ಟೀಕಿಸಿದಾಗ ಅದು ಕೇವಲ ನಮ್ಮನ್ನು ಕಡಿಮೆ ಮಾಡಲು ಮಾತ್ರ ಅಲ್ಲ. ಕೆಲವೊಮ್ಮೆ ಅದು ನಮ್ಮ ತಪ್ಪನ್ನು ತೋರಿಸುವ ಕನ್ನಡಿ ಆಗಬಹುದು. ಆ ಕನ್ನಡಿ ನೋಡಲು ಧೈರ್ಯ ಇದ್ದರೆ, ನಾವು ನಮ್ಮನ್ನು ಸುಧಾರಿಸಿಕೊಳ್ಳಲು ಸಾಧ್ಯ.

ಇದನ್ನೂ ಓದಿ:

ಟೀಕೆ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸಲು ಬಿಡದೆ, ಅದನ್ನು ಒಂದು ಅವಕಾಶವಾಗಿ ನೋಡಿದರೆ ಅದು ಬೆಳವಣಿಗೆಯ ದಾರಿ ಆಗುತ್ತದೆ. ಯಶಸ್ಸಿನ ದಾರಿಗೆ ಸಾಗುವ ಬಹುತೇಕ ಜನರು ಆರಂಭದಲ್ಲಿ ಟೀಕೆಗಳನ್ನು ಎದುರಿಸಿದ್ದಾರೆ. ಆದರೆ ಅವರು ಅದನ್ನು ಅಡ್ಡಿಯಂತೆ ಅಲ್ಲ, ಪಾಠದಂತೆ ಸ್ವೀಕರಿಸಿದ್ದಾರೆ.

ಎಲ್ಲ ಟೀಕೆಗಳೂ ಸರಿಯೇ ಎಂದು ಅರ್ಥವಲ್ಲ. ಆದರೆ ಅದರಿಂದ ಕಲಿಯಬೇಕಾದುದನ್ನು ಕಲಿತು, ಉಳಿದುದನ್ನು ಬಿಡುವ ಜಾಣತನ ಬೇಕು. ಯಾಕೆಂದರೆ ಕೆಲವೊಮ್ಮೆ ಟೀಕೆಗಳು ನಮ್ಮನ್ನು ತಡೆದು ನಿಲ್ಲಿಸಿ ಬಿಡುತ್ತವೆ… ಆದರೆ ಅದನ್ನೇ ಶಕ್ತಿಯಾಗಿ ಬಳಸಿದರೆ ಅದು ನಮ್ಮನ್ನು ಮುಂದೆ ಸಾಗಿಸುತ್ತದೆ.

Must Read