ಹೊಸದಿಗಂತ ವರದಿ, ಯಲ್ಲಾಪುರ
ಯಲ್ಲಾಪುರ ಪಟ್ಟಣದ ತಳ್ಳಿಗೇರಿ ಕ್ರಾಸ್ ಬಳಿ ಪೊಲೀಸರು 1 ಕೆಜಿ 84 ಗ್ರಾಂ ಅಕ್ರಮ ಗಾಂಜಾ ವಶಕ್ಕೆ ಪಡೆದರು.
ಹುಬ್ಬಳ್ಳಿಯ ನಿವಾಸಿ ನಾಸೀಮಾಬಾನು ರೆಹಮಾನ್ ಅಕ್ರಮವಾಗಿ ಗಾಂಜಾವನ್ನು ಯಲ್ಲಾಪುರ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ಆಯಿಷಾ ಅಬ್ದುಲ್ ಮುನಾಫ್ ಗಾಜನೂರ ಎಂಬುವವರಿಗೆ ಮಾರಲು ಬಂದಿದ್ದ ಸಂದರ್ಭದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ .
ಈ ಸಂದರ್ಭದಲ್ಲಿ ತಹಶೀಲ್ದಾರ ಯಲ್ಲಪ್ಪ ಗೊನೆಣ್ಣನವರ, ಪಿಎಸ್ಐ ಸಿದ್ದು ಗುಡಿ, ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಇದ್ದರು.