ಮಣಿಪುರದಲ್ಲಿ ಅಕ್ರಮ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಣಿಪುರದ (Manipur Violence) ವಿವಿಧ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು 8 ಬಂದೂಕುಗಳು,112 ಕಾಟ್ರಿಡ್ಜ್‌ಗಳು ಮತ್ತು 6 ಸ್ಫೋಟಕಗಳನ್ನು ವಶಪಡಿಸಿಕೊಂಡಿವೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಬಿಷ್ಣುಪುರ್, ಚುರಾಚಂದ್‌ಪುರ, ತೆಂಗನೌಪಾಲ್, ಕಾಂಗ್‌ಪೋಕ್ಪಿ ಮತ್ತು ರಾಜಧಾನಿ ಇಂಫಾಲ್ ಪಶ್ಚಿಮ ಜಿಲ್ಲೆಗಳಿಂದ ಶಸ್ತ್ರಾಸ್ತ್ರಗಳನ್ನ ವಶಪಡಿಸಿಕೊಳ್ಳಲಾಗಿದೆ. ತೆಂಗ್ನೌಪಾಲ್ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ಸಂದರ್ಭದಲ್ಲಿ 6 ಬಂಕರ್‌ಗಳನ್ನ ಸಹ ನಾಶಪಡಿಸಲಾಗಿದೆ.

ಇಂಫಾಲ್ ಜಿಲ್ಲೆಯ ಮಂತ್ರಪುಖ್ರಿ ಪ್ರದೇಶದಿಂದ ಒಪಿಯಾಡ್ ನೋವು ನಿವಾರಕ ಸಿರಪ್‌ನ 1,240 ಕೊಡೈನ್ ಫಾಸ್ಫೇಟ್ ಬಾಟಲಿಗಳೊಂದಿಗೆ ಅಸ್ಸಾಂ ಮೂಲದ ನಾಲ್ವರನ್ನ ಬಂಧಿಸಿದೆ ಎಂದು ನಾರ್ಕೋಟಿಕ್ಸ್ ಅಂಡ್‌ ಅಫೇರ್ಸ್‌ ಆಫ್‌ ಬಾರ್ಡರ್‌ (NAB) ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!