ಲೈವ್‌ ಪರ್ಫಾಮೆನ್ಸ್‌ ವೇಳೆ ಪೊಲೀಸರ ದಿಢೀರ್ ಎಂಟ್ರಿ: ರೆಹಮಾನ್‌ ಕಾರ್ಯಕ್ರಮಕ್ಕೆ ಅಡ್ಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಿನ್ನೆ ಮೇ 1 ರಂದು ಪುಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದಕ್ಕೆ ಎ.ಆರ್.ರೆಹಮಾನ್ ತಮ್ಮ ಹಾಡಿನ ಮೂಲಕ ಎಲ್ಲರನ್ನು ರಂಜಿಸುತ್ತಿದ್ದರು. ರೆಹಮಾನ್ ಹಾಡುತ್ತಿರುವಾಗಲೇ ಪೊಲೀಸರು ಬಂದು ಕಾರ್ಯಕ್ರಮ ನಿಲ್ಲಿಸಿ ಕೂಡಲೇ ಅಲ್ಲಿಂದ ತೆರಳುವಂತೆ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಪುಣೆಯಲ್ಲಿ ರಾತ್ರಿ 10 ಗಂಟೆಯ ನಂತರ ಸಾರ್ವಜನಿಕ ಪ್ರದರ್ಶನಗಳನ್ನು ನಿಷೇಧಿಸಲಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಕಾರ್ಯಕ್ರಮದ ಆಯೋಜಕರಿಗೆ 10 ಗಂಟೆಯವರೆಗೆ ಅನುಮತಿ ನೀಡಿದರು. ಆದರೆ 10.15ಸಮಯವಾದರೂ ಆಯೋಜಕರು ಕಾರ್ಯಕ್ರಮ ನಡೆಸುತ್ತಿದ್ದರಿಂದ ವೇದಿಕೆ ಮೇಲೆ ಎಆರ್ ರೆಹಮಾನ್ ಹಾಡುತ್ತಿದ್ದಾಗ ಪೊಲೀಸರು ವೇದಿಕೆಗೆ ತೆರಳಿ ಕಾರ್ಯಕ್ರಮ ನಿಲ್ಲಿಸಿದರು. ಕಾರ್ಯಕ್ರಮದ ಆಯೋಜಕರನ್ನು ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ ಕಾರ್ಯಕ್ರಮಕ್ಕೆ ಬಂದಿದ್ದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿ ವಾಪಸ್ ತೆರಳಿದರು.

ಇದನ್ನು ಹಲವು ಅಭಿಮಾನಿಗಳು ಟೀಕಿಸಿದರೆ, 10 ಗಂಟೆಯ ನಂತರ ಯಾವುದೇ ಕಾರ್ಯಕ್ರಮಗಳನ್ನು ನಡೆಸಬಾರದು ಎಂದು ಪುಣೆ ವಲಯ 2 ಡಿಸಿಪಿ ಸ್ಮಾರ್ತನ್ ಪಾಟೀಲ್ ಹೇಳಿದ್ದಾರೆ. 10ರವರೆಗೆ ಕಾರ್ಯಕ್ರಮ ಆಯೋಜಕರು ಅನುಮತಿಯನ್ನೂ ಪಡೆದಿದ್ದರು. ನೀಡಿದ್ದ ಗಡುವು ಸಮಯ ಮುಗಿದ ಮೇಲೂ ಕಾರ್ಯಕ್ರಮ ನಿಲ್ಲದ ಕಾರಣ ನಮ್ಮ ಪೊಲೀಸರು ವೇದಿಕೆಗೆ ತೆರಳಿ ಕಾರ್ಯಕ್ರಮಕ್ಕೆ ಅಡ್ಡಿಯುಂಟು ಮಾಡಿದರು.

ರೆಹಮಾನ್ ಹಾಡನ್ನು ಹಾಡುತ್ತಿದ್ದಾಗ ಪೊಲೀಸರು ಬಂದು ತಡೆದಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಕಾರಿದ್ದಾರೆ. ಪುಣೆ ಪೊಲೀಸರ ವಿರುದ್ಧ ಎಆರ್ ರೆಹಮಾನ್ ಅವರನ್ನು ಬೆಂಬಲಿಸಿ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ಮಾಡಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!