ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತ್ತೆ-ಮಾವ ನೀಡುತ್ತಿದ್ದ ಕಿರುಕುಳ ಸಹಿಸಲಾಗದೇ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಪೊಲೀಸ್ ಕಾನ್‌ಸ್ಟೇಬಲ್ ಅನುರಾಗ್ ಸಿಂಗ್ ಅವರ ಪತ್ನಿ ಸೌಮ್ಯ ಕಶ್ಯಪ್ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮೂಲಗಳ ಪ್ರಕಾರ, ಬಕ್ಷಿ ಕಾ ತಲಾಬ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್‌ವೊಬ್ಬರು ಇನ್‌ಸ್ಟಾದಲ್ಲಿ ವಿಡಿಯೋ ರೀಲ್ಸ್ ನೋಡುವಾಗ ಮೃತ ಪೊಲೀಸ್ ಕಾನ್‌ಸ್ಟೇಬಲ್ ಪತ್ನಿ ಹರಿಬಿಟ್ಟ ವಿಡಿಯೋ ಗಮನಿಸಿದ್ದಾರೆ. ನಂತರ ಪ್ರಕರಣ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ, ಅತ್ತೆ, ಮಾವ ಹಾಗೂ ಮೈದುನ ಮೂವರು ಸೇರಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನನ್ನ ಗಂಡನನ್ನು ನನ್ನಿಂದ ಬೇರ್ಪಡಿಸಿ, ಅವರಿಗೆ ಬೇರೆ ಮದುವೆ ಮಾಡಲು ಬಯಸುತ್ತಿದ್ದಾರೆ. ಅದೇ ಕಾರಣಕ್ಕೆ ನನಗೆ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ. ಜೊತೆಗೆ ಮೈದುನ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ತನ್ನ ಗಂಡನ ಚಿಕ್ಕಪ್ಪ ವಕೀಲ ಎಂದು ಅವರು ಹೇಳಿದರು. ವಕೀಲರು ನನ್ನ ಗಂಡನ ಬಳಿ ನನ್ನನ್ನು ಕೊಲ್ಲಲು ಹೇಳಿ ನನ್ನ ಗಂಡನನ್ನು ಬಚಾವ್ ಮಾಡುವುದಾಗಿ ಹೇಳಿದರು ಎಂದು ಸೌಮ್ಯ ಕಶ್ಯಪ್ ಆತಂಕಕಾರಿ ವೀಡಿಯೊದಲ್ಲಿ ಹೇಳಿದ್ದಾರೆ. ಕಾನ್‌ಸ್ಟೆಬಲ್‌ನ ಜಿತೇಂದ್ರ ದುಬೆಪತ್ನಿ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಲಕ್ನೋ ಪೊಲೀಸರು ದೃಢಪಡಿಸಿದರು. ಪ್ರಭಾರ ಇನ್ಸ್‌ಪೆಕ್ಟರ್ ಮತ್ತು ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದರು. ಘಟನೆ ಸಂಬಂಧ ಉತ್ತರ ಲಕ್ನೋ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.