ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಬ್ಯಾಂಕ್ ಖಾತೆ ಸೀಜ್ ಮಾಡಿರುವ ಆದಾಯ ತೆರಿಗೆ ಇಲಾಖೆಯ ಕೃತ್ಯ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಗೃಹ ಸಚಿವ ಪರಮೇಶ್ವರ್ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳಿಗಳಿಗೆ ಖಾತೆ ಸೀಜ್ ಮಾಡುವ ಅವಶ್ಯಕತೆ ಇರಲಿಲ್ಲ.
ಅಕೌಂಟ್ ವಿವರ ಕೇಳಬಹುದಿತ್ತು. ಇದು ಕಾಂಗ್ರೆಸ್‌ಗೆ ತೊಂದರೆ ಕೊಡುವ ಕೇಂದ್ರ ಸರ್ಕಾರದ ಉದ್ದೇಶ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಹೀಗೆ ಮಾಡಿರುವುದು ಉದ್ದೇಶಪೂರ್ವಕ. ಇದರಲ್ಲಿ ರಾಜಕೀಯ ಇದೆ ಎಂದು ಅವರು ಹೇಳಿದ್ದಾರೆ.