ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದ ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಆದರೆ ಇದೇ ಯೋಜನೆಯಿಂದ ಸಾಕಷ್ಟು ಜನರ ದುಡಿಮೆಗೆ ಸಮಸ್ಯೆಯಾಗಿದ್ದು, ಬಿಜೆಪಿ ಈ ಬಗ್ಗೆ ಮಾತನಾಡಿದೆ.
ಬಡ ವರ್ಗದ ಜನರು ಆಟೋ ಓಡಿಸುತ್ತಾ ಜೀವನ ಸಾಗಿಸುತ್ತಿದ್ದಾರೆ. ಆದರೆ ಫ್ರೀ ಬಸ್‌ನಿಂದಾಗಿ ಯಾರೊಬ್ಬರೂ ಆಟೋದಲ್ಲಿ ಬರುತ್ತಿಲ್ಲ. ಹೆಚ್ಚಿನ ಮಹಿಳೆಯರು ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದರು ಆದರೆ ಈಗ ಅವರು ಬಸ್‌ಗಾಗಿ ಕಾದು ಹೋಗುತ್ತಾರೆ. ರಾಜ್ಯದ ಹೈನುಗಾರರು ಹೈರಾಣಾಗಿದ್ದಾರೆ, ನೇಕಾರರು ನಲುಗಿದ್ದಾರೆ, ಚಾಲಕರು ಸೊರಗಿದ್ದಾರೆ ಎಂದಿದ್ದಾರೆ.
ಬಡ ರಿಕ್ಷಾ ಚಾಲಕರೊಬ್ಬರು ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಹಸಿದ ಹೊಟ್ಟೆಯಲ್ಲಿಯೇ ಮಾತನಾಡುತ್ತಿದ್ದೇನೆ, ನಾವು ಏನು ಪಾಪ ಮಾಡಿದ್ದೀವಿ, ನಮ್ಮ ಹೊಟ್ಟೆಯ ಮೇಲೆ ಏಕೆ ಹೊಡೆಯುತ್ತಿದ್ದೀರಿ, ಮನೆ ಸಾಗಿಸಲು ಕಷ್ಟವಾಗಿದೆ ಎಂದಿದ್ದಾರೆ. ಈ ವಿಡಿಯೋ ನೋಡಿದರೂ ನಿಮ್ಮ ಮನಸ್ಸು ಕರಗೋದಿಲ್ವಾ? ಅಷ್ಟಕ್ಕೂ ಇವರ ಸಮಸ್ಯೆ ಆಲಿಸುವ ವ್ಯವಧಾನವಾದ್ರೂ ನಿಮಗೆ ಇದೆಯೇ ಎಂದು ಸಿದ್ದರಾಮಯ್ಯಗೆ ಸವಾಲ್ ಹಾಕಿದ್ದಾರೆ.
https://twitter.com/BJP4Karnataka/status/1671827004482789376?s=20