ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುವ ತೋರಿ ಟೀಕೆಗೆ ಗುರಿಯಾಗಿದ್ದ ಪಾಕಿಸ್ತಾನ ತಂಡದ ಮುಖ್ಯ ಕೋಚ್ ಮುಹಮ್ಮದ್ ವಾಸಿಮ್ ಅವರ ಒಪ್ಪಂದವನ್ನು ನವೀಕರಿಸದಿರಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಧರಿಸಿದೆ.
ಪಾಕ್ ಆಡಿದ ಏಳು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲು ಮತ್ತು ಉಳಿದ ಮೂರು ಪಂದ್ಯಗಳು ಮಳೆಯಲ್ಲಿ ರದ್ದಾಗಿದ್ದವು. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರು ವಾಸೀಮ್ ಭರವಸೆ ನೀಡಿದಂತೆ ಪ್ರದರ್ಶನ ನೀಡದ ಕಾರಣ ನಿರಾಶೆಗೊಂಡಿದ್ದಾರೆ ಎಂದು ಪಿಸಿಬಿಯ ವಿಶ್ವಾಸಾರ್ಹ ಮೂಲವೊಂದು ತಿಳಿಸಿದೆ.
ಪಿಸಿಬಿ ಕಳೆದ ವರ್ಷ ವಾಸಿಮ್ ಅವರನ್ನು ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕ ಮಾಡಿತ್ತು. ಮತ್ತು ಅವರ ಅವಧಿಯಲ್ಲಿ ಪಾಕಿಸ್ತಾನ ತಂಡವು ಏಷ್ಯಾ ಕಪ್ ಸೆಮಿಫೈನಲ್‌ನಲ್ಲಿ ಸೋಲು, ನಂತರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಮಹಿಳಾ ಟಿ20 ವಿಶ್ವಕಪ್‌ನ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದು ಗೆಲುವು ಮಾತ್ರ ಗಳಿಸಿತ್ತು. ಅಂತಾರಾಷ್ಟ್ರೀಯ ಈವೆಂಟ್‌ಗಳಲ್ಲಿ ಅದರ ಅತ್ಯಂತ ದುರ್ಬಲ ಸಾಧನೆಯಾಗಿದೆ.
ಮುಖ್ಯ ಕೋಚ್ ಅವರ ವರ್ತನೆಯಿಂದಾಗಿ ಅವರು ತಂಡದ ಇತರ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿಲ್ಲ ಅಥವಾ ಚೆನ್ನಾಗಿ ಮಾತನಾಡುತ್ತಿಲ್ಲ ಎಂಬ ದೂರುಗಳೂ ಇವೆ ಎಂದು ಮೂಲಗಳು ತಿಳಿಸಿವೆ. ಮುಂದಿನ ಕೆಲವು ದಿನಗಳಲ್ಲಿ ಪಿಸಿಬಿ ಹೊಸ ಮುಖ್ಯ ಕೋಚ್ ಅನ್ನು ಘೋಷಿಸುವ ನಿರೀಕ್ಷೆಯಿದೆ ಮತ್ತು ವಿದೇಶಿ ಕೋಚ್ ಜೊತೆ ಮಾತುಕತೆ ನಡೆಸುತ್ತಿದೆ ಎನ್ನಲಾಗಿದೆ.

