ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಟೈಟನ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ ತಂಡ ಗೆಲುವು ಸಾಧಿಸಿದೆ. ನಿಕೋಲಸ್ ಪೂರನ್ ಹಾಗೂ ಐಡೆನ್ ಮಾರ್ಕ್ರಾಮ್ ಅರ್ಧಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಆರಂಭಿಕರಾಗಿ ಕಣಕ್ಕಿಳಿದಿದ್ದ ಐಡೆನ್ ಮಾರ್ಕ್ರಮ್ ಹಾಗೂ ರಿಷಭ್ ಪಂತ್ ಮೊದಲ ವಿಕೆಟ್ಗೆ 65 ರನ್ಗಳ ಭರ್ಜರಿ ಜೊತೆಯಾಟ ನೀಡಿತು.
ರಿಷಭ್ ಪಂತ್, 18 ಎಸೆತಗಳಲ್ಲಿ 4 ಬೌಂಡರಿ ಸಹಿತ 28ರನ್ಗಳಿಸಿ ಔಟ್ ಆದರು. ಆದರೆ 2ನೇ ವಿಕೆಟ್ಗೆ ಮಾರ್ಕ್ರಮ್-ಪೂರನ್ 58 ರನ್ಗಳ ಜೊತೆಯಾಟ ನೀಡಿ ಗುಜರಾತ್ ವಿರುದ್ಧ ಮೇಲುಗೈ ಸಾಧಿಸಿದರು. ಮಾರ್ಕ್ರಮ್ 31 ಎಸೆತಗಳಲ್ಲಿ 9 ಬೌಂಡರಿ,1 ಸಿಕ್ಸರ್ ಸಹಿತ 58 ರನ್ಗಳಿಸಿದರು. ಪೂರನ್ 34 ಎಸೆತಗಳಲ್ಲಿ 1 ಬೌಂಡರಿ, 7 ಸಿಕ್ಸರ್ಗಳ ಸಹಿತ 61 ರನ್ಗಳಿಸಿದರು.
ಕೊನೆಯಲ್ಲಿ ಬದೋನಿ 20 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ ಅಜೇಯ 28 ರನ್ಗಳಿಸಿದರು. ಮಿಲ್ಲರ್ 11 ಎಸೆತಗಳಲ್ಲಿ 7 ರನ್ಗಳಿಸಿದರು. ಅಬ್ದುಲ್ ಸಮದ್ ಅಜೇ 2 ರನ್ಗಳಿಸಿದರು.