ಜನಪ್ರಿಯ ವೈದ್ಯ, ಗಾಯಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಶ್ರೀ ಮಾತಾ ಆಸ್ಪತ್ರೆಯ ಮಾಲಿಕ, ಪ್ರವೃತ್ತಿಯಲ್ಲಿ ಗಾಯಕರಾಗಿದ್ದ ಡಾ.ಸತೀಶ್ ಪೂಜಾರಿ (54) ಹೃದಯಾಘಾತದಿಂದ ಕೋಟತಟ್ಟು ಮಣೂರಿನ ಅವರ ಸ್ವಗೃಹದಲ್ಲಿ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ.

ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯಲ್ಲಿ ಮಾಲೀಕರಾಗಿದ್ದ ಇವರು ಗಾಯಕರಾಗಿ ಕರಾವಳಿ ಭಾಗದಲ್ಲಿ ಜನಪ್ರಿಯತೆ ಗಳಿಸಿದ್ದರು. ಅನೇಕ ಸಂಗೀತ ವೀಡಿಯೊಗಳನ್ನು ಹೊರತಂದಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಡಾ. ಸತೀಶ್ ಪೂಜಾರಿ ಇ.ಎನ್.ಟಿ. ತಜ್ಞ ಕೂಡ ಆಗಿದ್ದರು.

Heart Attack: ಕುಂದಾಪುರದ ಖ್ಯಾತ ವೈದ್ಯ ಡಾ. ಸತೀಶ್ ಪೂಜಾರಿ ನಿಧನ | Kundapura  Famous Doctor Satish Poojary Passed Away Due To Heart Attack - Kannada  Oneindia

ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆಯ ಮೂಲಕ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದ ಡಾ. ಸತೀಶ್ ಪೂಜಾರಿ ಕರಾವಳಿ ಭಾಗದಲ್ಲಿ ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸದಾ ಕಾಲ ಪ್ರೋತ್ಸಾಹ ನೀಡುತ್ತಿದ್ದರು. ಅಲ್ಲದೇ ಬೃಹತ್‌ ಮಟ್ಟದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಸಹ ಆಯೋಜನೆ ಮಾಡುತ್ತಿದ್ದರು.

ಖ್ಯಾತ ಹಿರಿಯ ಗಾಯಕಿ ಎಸ್ ಜಾನಕಿಯವರ ಅಭಿಮಾನಿಯಾಗಿದ್ದ ಸತೀಶ್ ಪೂಜಾರಿಯವರು ಪ್ರತಿವರ್ಷ ಕೋಟೇಶ್ವರದಲ್ಲಿ ಡಾ ಎಸ್ ಜಾನಕಿ ಪುರಸ್ಕಾರ ಸಮಾರಂಭ ಆಯೋಜಿಸುತ್ತಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!