ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ಪಂಜಾಬಿ ನಟ-ಹಾಸ್ಯನಟ ಜಸ್ವಿಂದರ್ ಭಲ್ಲಾ (65) ಬೆಳಗ್ಗೆ ಮೊಹಾಲಿಯ ಫೋರ್ಟಿಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಆಗಸ್ಟ್ 23 ರಂದು ಮಧ್ಯಾಹ್ನ 12 ಗಂಟೆಗೆ ಮೊಹಾಲಿಯ ಬಲೋಂಗಿ ರುಧ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಭಲ್ಲಾ ಕಳೆದ ಕೆಲ ತಿಂಗಳಿಂದ ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು ಅಂತ ತಿಳಿದುಬಂದಿದೆ. ಸದ್ಯ ಭಲ್ಲಾ ಸಾವಿನ ಸುದ್ದಿ ಪಂಜಾಬಿ ಚಲನಚಿತ್ರೋದ್ಯಮ ಮತ್ತು ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ಆಘಾತ ನೀಡಿದೆ.