ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯಾದ ಮಹಿಳೆ ಬ್ಲೂ ಫಿಲಂ ನೋಡ್ತಾಳೆ, ಹಸ್ತ ಮೈಥುನ ಚಟ ಇದೆ ಅಂತ ವಿಚ್ಚೇದನ ಕೊಡೋಕೆ ಸಾಧ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ.
ಮದುವೆಯಾದ ಮಹಿಳೆ ಅಶ್ಲೀಲ ವಿಡಿಯೋ ನೋಡೋದು ಅಥವಾ ತನಗೆ ತಾನೇ ಖುಷಿಪಡಿಸಿಕೊಳ್ಳುವಂಥ ಹಸ್ತಮೈಥುನದಲ್ಲಿ ತೊಡಗಿಕೊಳ್ಳುವುದು ಗಂಡನ ಮೇಲಿನ ಕ್ರೌರ್ಯವಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಮತ್ತು ಜಸ್ಟೀಸ್ ಆರ್. ಪೂರ್ಣಿಮಾ ಅವರಿದ್ದ ಪೀಠ, ಗಂಡ-ಹೆಂಡತಿ ಸಂಬಂಧದಲ್ಲಿ ಇಂಥ ಕೆಲಸಗಳು ತೊಂದರೆ ತರುತ್ತದೆ ಎಂದು ಸಾಬೀತು ಮಾಡಲು ಸಾಧ್ಯವಿಲ್ಲ. ಇಂಥ ವರ್ತನೆಯನ್ನು ಗಂಡನ ಮೇಲೆ ಮಾಡೋ ಕ್ರೌರ್ಯ ಎಂದೂ ಪರಿಗಣಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಏನಿದು ಕೇಸ್?
2018 ಜುಲೈ 11ಕ್ಕೆ ಮದುವೆ ಆಗಿದ್ದ ತಮಿಳುನಾಡಿನ ಕರೂರು ಮೂಲದ ಗಂಡ ಹೆಂಡತಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು. 2020 ಡಿಸೆಂಬರ್ 9 ರಿಂದ ಇಬ್ಬರೂ ಬೇರೆ ಬೇರೆ ಇದ್ದೇವೆ. ತನ್ನ ಮದುವೆ ರದ್ದು ಮಾಡಲು ಕೌಟುಂಬಿಕ ಕೋರ್ಟ್ ಸಮ್ಮತಿ ನೀಡಲಿಲ್ಲ. ಹೀಗಾಗಿ ಗಂಡ ಹೈಕೋರ್ಟ್ ಮೆಟ್ಟಿಲೇರಿದ್ದ.
ಈ ವೇಳೆ ಗಂಡನ ಪರ ವಕೀಲರು ವಾದ ಮಾಡಿ, ಅವರ ನಡುವಿನ ಸಂಬಂಧ ಸರಿಪಡಿಸೋಕೆ ಆಗದಷ್ಟು ಹಾಳಾಗಿದೆ . ಉಪಯೋಗ ಇಲ್ಲದ ಸಂಬಂಧ ಮುಂದುವರೆಸೋಕೆ ಅರ್ಥ ಇಲ್ಲ ಎಂದು ವಾದಿಸಿದ್ದರು. ಮಾತ್ರವಲ್ಲದೇ ಹೆಂಡತಿಗೆ ಲೈಂಗಿಕ ರೋಗ ಇದೆ. ಹಸ್ತು ಮೈಥುನ ಚಟ ಮತ್ತು ಬ್ಲೂಫಿಲಂ ನೋಡುವ ಅಭ್ಯಾಸ ಇದೆ ಎಂದು ಆರೋಪ ಮಾಡಿದ್ದರು. ಆದರೆ, ಇದಕ್ಕೆ ಸರಿಯಾದ ದಾಖಲೆ ನೀಡಲು ವಿಫಲವಾಗಿದ್ದರು.
ಇದರ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ, ಅಶ್ಲೀಲ ಚಿತ್ರ ನೋಡಲು ಇಷ್ಟವಿಲ್ಲ ಎಂದ ಗಂಡನನ್ನು, ಇಂಥ ಸಿನಿಮಾ ನೋಡುವಂತೆ ಹೆಂಡತಿ ಬಲವಂತ ಮಾಡಿದರೆ ಮಾತ್ರವೇ ಇದು ಕ್ರೌರ್ಯ ಎನಿಸಿಕೊಳ್ಳಲಿದೆ ಎಂದು ಹೇಳಿದೆ.