ಪೋರ್ಶೆ ಕಾರು ಅಪಘಾತ: ಬಾಲಕನಿಗೆ ಬಂಧನದಿಂದ ಸಿಕ್ಕಿತು ಮುಕ್ತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೋರ್ಶೆ ಕಾರನ್ನು ಚಲಾಯಿಸಿಕೊಂಡು ಹೋಗಿ ಬೈಕ್​ನಲ್ಲಿ ಸಾಗುತ್ತಿದ್ದ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಗುದ್ದಿಸಿ ಅವರ ಸಾವಿಗೆ ಕಾರಣನಾದ ಬಾಲಕನನ್ನು ರಿಮಾಂಡ್​ನಿಂದ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್​ ಮಂಗಳವಾರ ಆದೇಶ ನೀಡಿದೆ.

ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಬಂಧಿಸಿದ್ದು ತಪ್ಪು ಎಂಬುದಾಗಿ ಕೋರ್ಟ್​ ಇದೇ ವೇಳೆ ಅಭಿಪ್ರಾಯಪಟ್ಟಿದೆ. ರಿಮಾಂಡ್ ಆದೇಶವನ್ನು ಕಾನೂನುಬಾಹಿರವೆಂದು ಘೋಷಿಸಿದೆ.

ಮೇ ತಿಂಗಳಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕ್​ಗೆ ಡಿಕ್ಕಿ ಹೊಡೆದಿತ್ತು. ಈ ಪ್ರಕರಣದಲ್ಲಿ ಬಾಲಕನಿಗೆ 14 ಗಂಟೆಯ ಒಳಗೆ ಜಾಮೀನು ನೀಡಿರುವುದಕ್ಕೆ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಕಾರು ಚಲಾಯಿಸಿದ್ದ ಬಾಲಕ ಸೇರಿ ಹದಿಹರೆಯದವನನ್ನು ಬಾಲಾಪರಾಧಿ ನ್ಯಾಯ ಮಂಡಳಿ (ಜೆಜೆಬಿ) ರಿಮಾಂಡ್ ಗೆ ನೀಡಿತ್ತು.

ಅಪಘಾತದ ಒಂದು ತಿಂಗಳ ನಂತರ, ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಷಾ ದೇಶಪಾಂಡೆ ಅವರ ನ್ಯಾಯಪೀಠವು ಬಾಲಾಪರಾಧಿ ನ್ಯಾಯ ಮಂಡಳಿಯ ನಿರ್ಧಾರ ಸರಿಯಲ್ಲ ಎಂದಿದೆ. ಅಪಘಾತವು ದುರದೃಷ್ಟಕರವಾಗಿದ್ದರೂ, ಅಪ್ರಾಪ್ತ ವಯಸ್ಸಿನ ಬಾಲಕನನ್ನು ವೀಕ್ಷಣಾ ಗೃಹದಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಹದಿಹರೆಯದವನನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯವು ಬಾಲಾಪರಾಧಿ ನ್ಯಾಯ ಮಂಡಳಿಗೆ ಆದೇಶಿಸಿದೆ.

ಅಪ್ರಾಪ್ತ ಬಾಲಕಿಯ ಪೋಷಕರು ಮತ್ತು ಅಜ್ಜ ಪ್ರಸ್ತುತ ಜೈಲಿನಲ್ಲಿರುವುದರಿಂದ, ಹದಿಹರೆಯದವನ ಕಸ್ಟಡಿಯನ್ನು ಅವನ ತಂದೆಯ ಚಿಕ್ಕಮ್ಮನಿಗೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

1 COMMENT

LEAVE A REPLY

Please enter your comment!
Please enter your name here

error: Content is protected !!