ಟ್ರೋಫಿಯ ಮೇಲೆ ಕಾಲಿಟ್ಟು ಪೋಸ್: ಕೊನೆಗೂ ಮೌನ ಮುರಿದ ಆಸೀಸ್ ಆಟಗಾರ ಮಿಚೆಲ್ ಮಾರ್ಷ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವಕಪ್ ನಲ್ಲಿ ಗೆದ್ದ ಆಸೀಸ್ ಬಳಿಕ ಟ್ರೋಫಿ ಜೊತೆ ಆಟಗಾರರು ಫೋಟೋ ಕ್ಲಿಕ್ಕಿಸಿದ್ದು, ಈ ವೇಳೆ ಆಲ್ ರೌಂಡರ್ ಮಿಚೆಲ್ ಮಾರ್ಷ್ ನಡೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ಇದಕ್ಕೆ ಕಾರಣ ಮಿಚೆಲ್ ಮಾರ್ಷ್ ಟ್ರೋಫಿಯ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದರು. ಆದ್ರೆ ಇದೀಗ ಮಾರ್ಷ್ (Mitchell Marsh) ಸ್ಪಷ್ಟನೆ ನೀಡಿದ್ದಾರೆ.

ನಾನು ಯಾರಿಗೂ ಅಗೌರವ ತೋರಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ. ಆ ಫೋಟೋ ಸಾಕಷ್ಟು ವೈರಲ್ ಆಗಿದೆ ಎಂದು ಹಲವರು ನನ್ನ ಗಮನಕ್ಕೆ ತಂದಿದ್ದರು. ಆದರೆ ನಾನು ಅದನ್ನು ನೊಡಲು ಹೋಗಿಲ್ಲ. ಟೀಕಿಸುವಂಥದ್ದು ಅದರಲ್ಲಿ ಏನೂ ಇಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಮುಂದೆಯೂ ಈ ರೀತಿಯ ಕೃತ್ಯವನ್ನು ಎಸಗುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾರ್ಷ್​, ‘ನಾನು ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಬಹುಶಃ ಹಾದು, ಮುಂದೆಯೂ ಹೀಗೆ ಮಾಡುತ್ತೇನೆ’ ಎಂದು ಉತ್ತರಿಸಿದ್ದಾರೆ.

ಆಸ್ಟ್ರೇಲಿಯನ್ ಮಾಧ್ಯಮಗಳೊಂದಿಗೆ ಮಾತನಾಡಿದ ಮಾರ್ಷ್​, ‘ಆ ಫೋಟೋದಲ್ಲಿ ಯಾರನ್ನೂ ಅವಮಾನಿಸುವ ಉದ್ದೇಶ ಇರಲಿಲ್ಲ. ನಾನು ಅದರ ಬಗ್ಗೆ ಹೆಚ್ಚು ಯೋಚಿಸಿಲ್ಲ. ನಾನು ಸೋಶಿಯಲ್ ಮೀಡಿಯಾವನ್ನು ಹೆಚ್ಚಾಗಿ ಬಳಸುವುದಿಲ್ಲ. ಆದರೆ ಇದನ್ನು ಗಮನಿಸಿದವರು ನೀವು ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟಿದ್ದರ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ ಎಂದು ನನಗೆ ಹೇಳಿದ್ದರು. ಅದು ಮುಗಿದು ಹೋದ ಅಧ್ಯಾಯ. ಆದರೆ, ಆ ಫೋಟೋದಲ್ಲಿ ಅಂಥದ್ದೇನೂ ಇರಲಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ನ.19 ರಂದು ಅಹಮದಾಬಾದ್‍ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ನಡೆದ 2023ರ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 6 ವಿಕೆಟ್‍ಗಳಿಂದ ಭಾರತ ತಂಡವನ್ನು ಮಣಿಸಿತ್ತು. ಗೆಲುವಿನ ನಂತರ ಸಂಭ್ರಮ ಆಚರಿಸಿಕೊಂಡಿದ್ದ ಆಸೀಸ್ ಪಡೆ, ಚಿತ್ರಗಳನ್ನು ಸಾಮಾಜಿಕ ಜಾಲಾತಾಣಗಳಲ್ಲಿ ಹಂಚಿಕೊಂಡಿತ್ತು. ಚಿತ್ರವೊಂದರಲ್ಲಿ ಮಿಚೆಲ್ ಮಾರ್ಷ್ ಟ್ರೋಫಿಯ ಮೇಲೆ ಕಾಲಿಟ್ಟು ಪೋಸ್ ಕೊಟ್ಟಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!