ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಧನೆಯ ಛಲವೊಂದಿದ್ದರೆ ಬದುಕಿನಲ್ಲಿ ಯಾವುದೂ ಅಡ್ಡಯಲ್ಲ ಎಂಬುದಕ್ಕೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಆಡಿದ ಈ ಒಬ್ಬ ಕ್ರಿಕೆಟ್ ಆಟಗಾರ ಐಪಿಎಸ್ ಅಧಿಕಾರಿ ಆಗಿರುವುದೇ ಸಾಕ್ಷಿ!
ಇವರ ಹೆಸರು ಕಾರ್ತಿಕ್ ಮಧಿರಾ. ಪ್ರಸ್ತುತ ಮಹಾರಾಷ್ಟ್ರ ಕೇಡರ್‌ನಲ್ಲಿ ನಿಯೋಜಿಸಲ್ಪ ಐಪಿಎಸ್ ಅಧಿಕಾರಿ.
ಮಧಿರಾ, ಅಂಡರ್ 13, ಅಂಡರ್ 15, ಅಂಡರ್ 17 ಹಾಗೂ ಅಂಡರ್ಗ 19ಳಲ್ಲಿ ಅಷ್ಟೇ ಅಲ್ಲ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಆಡಿದ ಕ್ರಿಕೆಟರ್. ಮೂಲತಃ ಹೈದರಾಬಾದ್‌ನವರಾದ ಇವರು, ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು. ಕ್ರಿಕೆಟ್ ಮೇಲಿನ ಆಸಕ್ತಿಯ ನಡುವೆಯೇ ಹುಟ್ಟಿಕೊಂಡಿದ್ದು ನಾಗರಿಕ ಸೇವೆ ಮಾಡಬೇಕು ಎಂಬ ಹಂಬಲ. ಅದಕ್ಕಾಗಿ ಪ್ರಯತ್ನ ಶುರುವಿಟ್ಟುಕೊಂಡರಾದರೂ ಆರಂಭದಲ್ಲಿ ಸೋಲನ್ನೇ ಕಾಣಬೇಕಾಯಿತು. ಯುಪಿಎಸ್‌ಸಿ, ಪ್ರಾಥಮಿಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗದಿರುವುದು ಸಹಿತ ಮೊದಲ ಮೂರು ಪ್ರಯತ್ನಗಳಲ್ಲಿ ವಿಫಲರಾದರು. ಆದರೂ ಹಠ ಮಾತ್ರ ಬಿಡಲಿಲ್ಲ. ತಯಾರಿಯಲ್ಲಿ ಮುಂದುವರಿಸಿ ಸಮಾಜಶಾಸ್ತ್ರದ ಮೇಲೆ ಹೆಚ್ಚಿನ ಅಧ್ಯಯನ ಆರಂಭಿಸಿದರು. ಅಂತಿಮವಾಗಿ ಯುಪಿಎಸ್‌ಸಿ ೨೦೧೯ ರ ಪರೀಕ್ಷೆಯಲ್ಲಿನ ತನ್ನ ನಾಲ್ಕನೇ ಪ್ರಯತ್ನದಲ್ಲಿ ಗೆಲುವುಕಂಡ ಅವರು, ೧೦೩ ನೇ ರ್ಯಾಂಕ್‌ನಲ್ಲಿ ತಮ್ಮ ಕನಸಿನ ಐಪಿಎಸ್ ಅನ್ನು ನನಸು ಮಾಡಿಕೊಂಡರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ