ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚರಾಜ್ಯ ಚುನಾವಣೆ ಅಂತ್ಯಗೊಂಡಿದ್ದು, ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಳ್ಳುತ್ತಿವೆ. ತೆಲಂಗಾಣದಲ್ಲಿ ಅಚ್ಚರಿಯ ಫಲಿತಾಂಶದ ಸುಳಿವು ಸಿಕ್ಕಿದೆ. ಈ ಬಾರಿ ರಾಜ್ಯದಲ್ಲಿ ಆಡಳಿತಾರೂಢ ಬಿಆರ್‌ಎಸ್ ಸೋಲಿನ ಅನುಭವ ಆಗಲಿದ್ದು, ಕಾಂಗ್ರೆಸ್ ಗೆಲುವಿನ ನಗೆ ಬೀರಲಿದೆ ಎಂದು ಹೇಳಲಾಗುತ್ತಿದೆ.
199 ವಿಧಾಸಭಾ ಕ್ಷೇತ್ರಗಳಲ್ಲಿರುವ 32.6 ದಶಲಕ್ಷ ಮತದಾರರು 2,290 ಅಭ್ಯರ್ಥಿಗಳ ಭವಿಷ್ಯ ಬರೆದಿದ್ದಾರೆ. ಈಗ ತೆಲಂಗಾಣ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.
ಯಾವ ಸಮೀಕ್ಷೆಯಲ್ಲಿ ಎಷ್ಟು ಸ್ಥಾನ?
ತೆಲಂಗಾಣ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-119, ಮ್ಯಾಜಿಕ್ ನಂಬರ್-60)
ಇಂಡಿಯಾ ಟಿವಿ-ಸಿಎನ್ಎಕ್ಸ್: ಕಾಂಗ್ರೆಸ್ 63-79, ಬಿಆರ್‌ಎಸ್ 31-47, ಬಿಜೆಪಿ 5-7
ಟುಡೇಸ್ ಚಾಣಕ್ಯ: ಕಾಂಗ್ರೆಸ್ 71, ಬಿಆರ್‌ಎಸ್ 33೩, ಬಿಜೆಪಿ 7
ಜನ್‌ಕೀಬಾತ್: ಕಾಂಗ್ರೆಸ್ 48-64, ಬಿಆರ್‌ಎಸ್ 40-55, ಬಿಜೆಪಿ 7-13
ಪೋಲ್ ಸ್ಟ್ರಾಟಜಿ ಗ್ರೂಪ್: ಕಾಂಗ್ರೆಸ್ 49-54, ಬಿಆರ್‌ಎಸ್ 53-58, ಬಿಜೆಪಿ 4-6
ರಿಪಬ್ಲಿಕ್ ಟಿವಿ-ಸಿ ವೋಟರ್: ಕಾಂಗ್ರೆಸ್ 47-59, ಬಿಆರ್‌ಎಸ್ 48-60, ಬಿಜೆಪಿ 5
ಟೈಮ್ಸ್ ನೌ: ಕಾಂಗ್ರೆಸ್ 37, ಬಿಆರ್‌ಎಸ್ 66, ಬಿಜೆಪಿ 7