ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚರಾಜ್ಯಗಳ ಚುನಾವಣೆ ಅಂತ್ಯಗೊಂಡ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು (Exit Polls) ಪ್ರಕಟಗೊಳ್ಳುತ್ತಿದ್ದು, ಮಧ್ಯಪ್ರದೇಶದಲ್ಲಿ (Madhya Pradesh)ವಿಜಯ ಮಾಲೆಯು ಯಾರಿಗೆ ಒಲಿಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಅಧಿಕಾರಕ್ಕೆ ತೀವ್ರ ಪೈಪೋಟಿ ಇದೆ.
230 ಸ್ಥಾನಗಳ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಪಡೆಯಲು ಕನಿಷ್ಠ 116 ಸ್ಥಾನಗಳ ಅಗತ್ಯವಿದೆ.
ಮಧ್ಯಪ್ರದೇಶ ಎಕ್ಸಿಟ್ ಪೋಲ್: (ಒಟ್ಟು ಸ್ಥಾನ-230, ಮ್ಯಾಜಿಕ್ ನಂಬರ್-116)
ದೈನಿಕ ಭಾಸ್ಕರ: ಬಿಜೆಪಿ:98-105, ಕಾಂಗ್ರೆಸ್: 105-120 ,ಇತರರು 0-15
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ : ಬಿಜೆಪಿ: 140-162, ಕಾಂಗ್ರೆಸ್: 68-90, ಇತರರು 0-3
ಜನ್ ಕೀ ಬಾತ್ :ಬಿಜೆಪಿ:100-123, ಕಾಂಗ್ರೆಸ್: 102-125, ಇತರರು ೦-5
ಟುಡೇಸ್ ಚಾಣಕ್ಯ: ಬಿಜೆಪಿ:139-163, ಕಾಂಗ್ರೆಸ್: 62-86, ಇತರರು 1-9
ರಿಪಬ್ಲಿಕ್ ಟಿವಿ: ಬಿಜೆಪಿ:118-130, ಕಾಂಗ್ರೆಸ್:97-107,ಇತರರು 0-2
ಟಿವಿ 9 ಭಾರತವರ್ಷ : ಬಿಜೆಪಿ:106-116, ಕಾಂಗ್ರೆಸ್ 111-121,ಇತರರು 0-6
ಪೂಲ್‌ಸ್ಟಾರ್ಟ್ : ಬಿಜೆಪಿ 106-116, ಕಾಂಗ್ರೆಸ್ 111-121, ,ಇತರರು: ೦
ಮ್ಯಾಟ್ರಿಜ್ : ಬಿಜೆಪಿ:118-130, ಕಾಂಗ್ರೆಸ್ 971-107,ಇತರರು 0-2
ಸಿ.ವೋಟರ್ : ಬಿಜೆಪಿ:88-112, ಕಾಂಗ್ರೆಸ್ 113-137,ಇತರರು 2-8