ದಿಗಂತ ವರದಿ ಧಾರವಾಡ:
ನಗರದ ಕೃಷಿ ವಿವಿಯಲ್ಲಿ ಧಾರವಾಡ ಲೋಕಸಭಾ ಚುನಾವಣೆ ಮತ ಏಣಿಕೆ ಕಾರ್ಯ ಮಂಗಳವಾರ ಆರಂಭವಾಗಿದೆ.
ಬೆಳಿಗ್ಗೆ 6.30ಕ್ಕೆ ಜಿಲ್ಲಾ ಚುನಾವಣಾ ಅಧಿಕಾರಿ, ಜಿಲ್ಲಾ ವೀಕ್ಷಕರು ಮತ್ತು ರಾಜಕೀಯ ಪಕ್ಷಗಳ ಏಜೆಂಟರ್ ಸಮ್ಮುಖದಲ್ಲಿ ಸ್ಟ್ರಾಂಗ್ ಬೀಗ ತೆರೆದು, ಮೊದಲಿಗೆ ಅಂಚೆ ಮತ ಏಣಿಕೆ ಕಾರ್ಯ ಕೈಗೊಂಡಿತು.
ಅಂಚೆ ಮತ ಏಣಿಕೆಗೆ 6 ಟೇಬಲ್ ವ್ಯವಸ್ಥೆ ಮಾಡಿದ್ದು, 6 ಜನ ಎ.ಆರ್.ಓ ಮತ ಏಣಿಕೆ ಕಾರ್ಯ ನಡೆಸಿದ್ದು, ಜಿಲ್ಲಾ ಚುನಾವಣಾ ಅಧಿಕಾರಿ ದಿವ್ಯ ಪ್ರಭು ಪರಿಶೀಲನೆ ನಡೆಸಿದರು.
ಬಿಜೆಪಿ-ಕಾಂಗ್ರೆಸ್ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟ ಧಾರವಾಡ ಲೋಕಸಭಾ ಕ್ಷೇತ್ರದ ಅಂಚೆ ಮತ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅಲ್ಪ ಮುನ್ನಡೆ ಸಾಧಿಸಿದ್ದು, ಕೈ ಅಭ್ಯರ್ಥಿ ವಿನೋದ ಅಸೂಟಿ ಹಿನ್ನಡೆಯಾಗಿದೆ.