ಹೊಸದಿಗಂತ ಡಿಜಿಟಲ್ ಡೆಸ್ಕ್:
ದುನಿಯಾ ವಿಜಯ್ ನಿರ್ದೇಶನದ ಹೊಸ ಸಿನಿಮಾ ‘ಸಿಟಿ ಲೈಟ್ಸ್’ ಚಿತ್ರದ ಪೋಸ್ಟರ್ ರಿವೀಲ್ ಆಗಿದೆ. ಪುತ್ರಿ ಮೋನಿಷಾ ಹಾಗೂ ವಿನಯ್ ರಾಜ್‌ಕುಮಾರ್ ಲುಕ್ ಅನಾವರಣ ಆಗಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ವಿಜಯ್ ಮಾಹಿತಿ ಹಂಚಿಕೊಂಡಿದ್ದಾರೆ.
ಸದ್ಯ ರಿಲೀಸ್ ಆಗಿರುವ ಪೋಸ್ಟರ್‌ನಲ್ಲಿ ವಿನಯ್ ಮತ್ತು ಮೋನಿಷಾ ತಲೆಯ ಮೇಲೆ ದೇವಿಯನ್ನು ಇಟ್ಟುಕೊಂಡು ಚಾಟಿ ಏಟು ಹೊಡೆದುಕೊಂಡು ಓಡಾಡುತ್ತಿರುವ ಲುಕ್ ಅನಾವರಣ ಆಗಿದೆ. ಇದರ ಸುತ್ತ ಹೆಣೆಯಲಾದ ಕಥೆ ಇದಾಗಿದೆ.
ಚಿತ್ರದ ಅಫಿಷಯಲ್ ಇನ್ಸ್ಟಾಗ್ರಾಂ ಖಾತೆಯಲ್ಲಿ, ‘ಚಡಿ ಏಟಿನಷ್ಟೇ ಚುರುಕಾದ ಸಿಟಿ ಲೈಟ್ಸ್ ಫಸ್ಟ್ ಲುಕ್’ ಎಂದು ಬರೆಯಲಾಗಿದೆ. ಸದ್ಯ ದುನಿಯಾ ವಿಜಯ್ ಅವರು ಮಗಳು ಮೋನಿಷಾ ಮತ್ತು ವಿನಯ್ ಮೂಲಕ ಹೇಳಲು ಹೊರಟಿರುವ ಕಥೆ ವಿಭಿನ್ನವಾಗಿರಲಿದೆ ಎಂಬ ನಿರೀಕ್ಷೆ ಅಭಿಮಾನಿಗಳಿಗಿದೆ. ಚಿತ್ರದ ಪೋಸ್ಟರ್ ಲುಕ್‌ನಿಂದ ನಿರೀಕ್ಷೆ ದುಪ್ಪಟ್ಟಾಗಿದೆ.
View this post on Instagram