ಹೊಸದಿಗಂತ ಡಿಜಿಟಲ್ ಡೆಸ್ಕ್:
ನಗರದ ರಸ್ತೆಗಳಲ್ಲಿ ಗುಂಡಿಗಳಿಂದ ಸಾರ್ವಜನಿಕರ ಸಮಸ್ಯೆ ಹೆಚ್ಚಾಗುತ್ತಿದೆ. ಇದರ ಪರಿಣಾಮವಾಗಿ ರಾಜಕೀಯ ಟೀಕೆಗಳು ಸಾಮಾನ್ಯವಾಗಿದ್ದು, ಈಗ ಶಾಸಕ ಮತ್ತು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಈ ಕುರಿತು ಮಾತನಾಡಿದ್ದು, ರಸ್ತೆಗುಂಡಿಗಳ ಬಗ್ಗೆ ಜವಾಬ್ದಾರಿ ಪಾಲಿಕೆ ಮತ್ತು ರಾಜ್ಯ ಸರ್ಕಾರದದ್ದು ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರದ ಸಮಯದಲ್ಲಿ ಹೈಕೋರ್ಟ್ ಮಾನಿಟರ್ ಮಾಡುತ್ತಿತ್ತು, ಮುಖ್ಯ ಆಯುಕ್ತರೊಂದಿಗೆ ಚೀಫ್ ಜಸ್ಟೀಸ್ ಕೂಡ ಗಮನವಿಟ್ಟು ನೋಡುತ್ತಿದ್ದಿದ್ದರು. ಅದನ್ನ ನೋಡಿ ನಾವು ಗುಂಡಿ ಬೀಳದಂತೆ ನೋಡಿಕೊಳ್ಳಬೇಕಿತ್ತು. ರಸ್ತೆ ಗುಂಡಿಗಳಿಂದ ಬಿಜೆಪಿಗೂ ಹಿಂದೆ ಕೆಟ್ಟ ಹೆಸರು ಬಂದಿತ್ತು. ಈಗ ನಮಗೂ ಟೀಕೆ ಟಿಪ್ಪಣಿಗಳು ಬರುತ್ತಿವೆ ಎಂದರು.
ರಸ್ತೆಗುಂಡಿಗಳನ್ನು ಮುಚ್ಚುವ ಜವಾಬ್ದಾರಿ ನಮ್ಮದು. ಸಿಎಂ ಮತ್ತು ಡಿಸಿಎಂ ಅಕ್ಟೋಬರ್ ಒಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಕೆಲಸ ನಡೆಯುತ್ತಿದೆ ಎಂದರು.