ಹೊಸದಿಗಂತ ಡಿಜಿಟಲ್ ಡೆಸ್ಕ್:
‘ಭ್ರಷ್ಟಾಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂಬರ್–1 ಆಗಿದೆ’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆಗೆ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಗಾಂಧೀಜಿ ಅವರ ‘ಸತ್ಯಮೇವ ಜಯತೇ’ ಘೋಷ ವಾಕ್ಯವನ್ನು ಕಾಂಗ್ರೆಸ್ ನಾಯಕರು ಶ್ರದ್ಧಾಭಕ್ತಿಯಿಂದ ಪರಿಪಾಲನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಯರಡ್ಡಿ ತಮ್ಮ ಹೇಳಿಕೆಗೆ ಬದ್ಧವಾಗಿರಲಿ. ಅವರು ಮಾತು ಬದಲಿಸುವ ಅಗತ್ಯವಿಲ್ಲ. ಸತ್ಯ ಹೇಳಿದ ಮೇಲೆ ಅದಕ್ಕೆ ಬದ್ಧವಾಗಿರಬೇಕು. ಸಿದ್ದರಾಮಯ್ಯ ಅವರ ಸರಣಿ ಹಗರಣಗಳ ಬಗ್ಗೆ ಗೊತ್ತಿರುವ ರಾಯರಡ್ಡಿ ಅವರು ಈಗ ಮಾತು ಬದಲಿಸಿ, ಮುಖ್ಯಮಂತ್ರಿ ಗುಣಗಾನ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಈಗ ರಾಯರಡ್ಡಿ ಹೇಳುತ್ತಿದ್ದಾರೆ. ಅಧಿಕಾರ ಮತ್ತು ಆಸರೆ ನಾಲಿಗೆಯ ಶಕ್ತಿಯನ್ನು ಕುಂದಿಸುತ್ತವೆ ಎಂದು ಟೀಕಿಸಿದ್ದಾರೆ.