ಹೊಸದಿಗಂತ ವರದಿ ಹುಬ್ಬಳ್ಳಿ:
ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ಮುಖ್ಯವೇ ಹೊರತು ಸಂಸ್ಕೃತಿ ಹಾಗೂ ಹೆಣ್ಣು ಮಕ್ಕಳ ರಕ್ಷಣೆ ಮುಖ್ಯವಲ್ಲ .ತುಷ್ಟೀಕರಣದಲ್ಲಿ ಮುಳುಗಿದ ಅವರು ಲವ್ ಜಿಹಾದ್, ಹೆಣ್ಣು ಮಕ್ಕಳ ದೌರ್ಜನ್ಯದ ಬಗ್ಗೆ ಏನು ಮಾತನಾಡಲ್ಲ ಎಂದು ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ್ ಕಿಡಿಕಾರಿದರು.
ನಗರದಲ್ಲಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಅಂಗವಾಗಿ ಇಲ್ಲಿಯ ಸ್ಟೇಶನ್ ರಸ್ತೆಯಲ್ಲಿ ಬಿ.ಆರ್. ಅಂಬೇಡ್ಕರ್ ಅವರು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಅವರ ಮನೆಯ ಹೆಣ್ಣು ಮಕ್ಕಳಿಗೂ ಏನಾದರೂ ಸುಮ್ಮನಿರುತ್ತಾರೆ. ಸರ್ಕಾರದಿಂದ ಏನು ಕ್ರಮವಾಗಲ್ಲ. ಆದ್ದರಿಂದ ಲವ್ ಜಿಹಾದ್ ವಿರುದ್ಧ ಕಠಿಣ ಕಾಯ್ದೆ ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಲವ್ ಜಿಹಾದ್ ವೈರಸ್‌ನಂತೆ ದೊಡ್ಡ ಪ್ರಮಾಣದಲ್ಲಿ ಹರಡಿದೆ. ಇದನ್ನು ತಡೆಯಲು ಸಮಾಜ ಹಾಗೂ ಪಾಲಕರು ಜಾಗೃತರಾಗಬೇಕು. ಹಿಂದು ಸಂಘಟಕರು ನಿರಂತರವಾಗಿ ಈ ಕಾರ್ಯದಲ್ಲಿ ತೊಡಗಿದ್ದು, ಜಾಗೃತಿ ಮೂಡಿಸುತ್ತಿದ್ದಾರೆ. ಶ್ರೀರಾಮ ಸೇನೆ ಹೆಲ್ಪಲೈನ್ ಆರಂಭಿಸಿದ್ದು, ೮ ಸಾವಿರ ಕರೆಗಳು ಬಂದಿವೆ ಎಂದು ತಿಳಿಸಿದರು.
ಮಹರಾಷ್ಟ್ರದ ಐಟಿ ಕಂಪನಿಯೊಂದರಲ್ಲಿ ಲವ್ ಜಿಹಾದ್ ಹಾಗೂ ಮತಾಂತರ ಮಾಡುತ್ತಿದ್ದ ೭ ಜನರ ಬಂಽಸಲಾಗಿದೆ. ಇಡೀ ದೇಶದಲ್ಲಿ ಎಲ್ಲ ಕಂಪನಿಗಳಲ್ಲಿ ನಡೆಯುತ್ತಿದೆ. ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಜಿಮ್‌ಗಳ ಮೇಲೆ ಪೊಲೀಸರು ಹಾಗೂ ಸರ್ಕಾರ ಕಣ್ಣು ಇರುತ್ತದೆಯೋ ಗೊತ್ತಿಲ್ಲ. ಹಿಂದು ಸಂಘಟಕರು ಕಣ್ಣು ಇರುತ್ತದೆ. ಮುಂದೆ ನಾವು ಪೊಲೀಸರಿಗೆ ದೂರು ನೀಡಲ್ಲ. ಅಂತ ಕೃತ್ಯಗಳು ನಡೆದರೆ ಜಿಮ್‌ಗೆ ಹೊಕ್ಕು ಹೊಡೆಯುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಯುವತಿಯರ ಮೇಲೆ ದೌರ್ಜನ್ಯ, ಬರ್ಬರ ಹತ್ಯೆಗಳು, ಲವ್ ಜಿಹಾದ್ ಹಾಗೂ ಮತಾಂತರ ನಡೆಯುತ್ತಿದ್ದರೂ ಸಹ ಹಿಂದು ಯುವತಿಯರು ಅನ್ಯ ಸಮುದಾಯ ಯುವಕರ ಬಲೆ ಬಿಳುತ್ತಿದ್ದಾರೆ. ಈಗಲಾದರೂ ಹಿಂದು ಯುವತಿಯರು ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸು ನನಸಾಗಿಲ್ಲ. ದೇಶದಲ್ಲಿ ಅಸ್ಪೃಶ್ಯತೆ ಜೀವಂತವಾಗಿದೆ. ದಲಿತದ ಮೇಲೆ ದೌರ್ಜನ್ಯ ನಡೆಯುತ್ತಿದೆ. ಸಮಾನತೆ ಪೂರ್ಣವಾಗಿಲ್ಲ. ನಾವೆಲ್ಲರೂ ಒಟ್ಟಿಗೆ ಸೇರಿ ಅವರ ಕನಸು ನನಸು ಮಾಡಬೇಕು ಎಂದು ಹೇಳಿದರು.



