POWER CUT | ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಭೈರಸಂದ್ರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಇಂದು ಬೆಳಗ್ಗೆ 10 ರಿಂದ ಸಂಜೆ 5ರ ವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

66/11 ಬ್ರಿಗೇಡ್ ಮೆಡೋಸ್ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ತ್ರೈಮಾಸಿಕ ನಿರ್ವಹಣೆ ಕಾಮಗಾರಿಗಳನ್ನು ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ. ಈ ಕುರಿತಾಗಿ ಬೆಸ್ಕಾಂ ಮಾಹಿತಿ ನೀಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಲಾಗಿದೆ.

ಭೈರಸಂದ್ರ, ಹೊಸಪಾಳ್ಯ, ಎಂ.ಎಲ್.ಎ ತೋಟ, ಬಂಜಾರಪಾಳ್ಯ, ಅಗರ, ಕರಡಿಗುಡ್ಡ, ಸಿದ್ದನಪಾಳ್ಯ, ಅಭಯ ಕಾಲೇಜ್, ವ್ಯಾಲಿ ಸ್ಕೂಲ್, ನವಿಲು ಮನೆ, ಸಾಲುದೊಡ್ಡಿ, ತಾತಗುಣಿ ಕಾಲೋನಿ, ಲಕ್ಷ್ಮೀಪುರ, ಸಾಲುದೊಡ್ಡಿ ಗೇಟ್, ನವಗ್ರಾಮ, ವಡೇರಹಳ್ಳಿ, ಚೌಡೇಶ್ವರಿ ನಗರ, ತಾತ ಗುಣಿ, ರಾಮಚಂದ್ರಪ್ಪ ಲೇಔಟ್, ಕಾವೇರಿ ನಗರ, ರಮೇಶ್ ನಗರ, ಸಾಲುಹುಣಸೆ.

ಬಾದೇಕಟ್ಟೆ, ಉತ್ತರಿ, ತಿಮ್ಮೇಗೌಡನಪಾಳ್ಯ, ದಿಣ್ಣೆಪಾಳ್ಯ, ಊದಿಪಾಳ್ಯ, ಬಸಪ್ಪನ ಪಾಳ್ಯ, ಬಿ.ಎಂ. ಕಾವಲ್, ಓ.ಬಿ. ಚೂಡಹಳ್ಳಿ, ಮಂತ್ರಿ ಪ್ರಿಮೈಸ್, ಬ್ರಿಗೇಡ್ ಮೆಡೋಸ್ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!