ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಇಬ್ಬರು ವಿದೇಶಿಯರು ಸೇರಿದಂತೆ ಕನಿಷ್ಠ 28 ಮಂದಿ ಬಲಿಯಾಗಿದ್ದು, ಈ ಘಟನೆಯನ್ನು ಹಲವು ದೇಶಗಳು ಖಂಡಿಸಿವೆ.
ಈ ನಡುವೆ ಭಾರತ ವಿವಿಧ ದೇಶಗಳ ರಾಯಭಾರಿಗಳ ಜೊತೆಗೆ ಸಮಾಲೋಚನಾ ಸಭೆ ನಡೆಸಿದ್ದು, ಜಗತ್ತಿನ ಬಹುತೇಕ ರಾಷ್ಟ್ರಗಳು ಈ ದಾಳಿಯನ್ನು ಖಂಡಿಸಿ, ಭಾರತದ ಪರವಾಗಿ ನಾವು ಇದ್ದೇವೆ ಎಂದು ಬೆಂಬಲ ಸೂಚಿಸಿವೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಇಂದು ನವದೆಹಲಿಯಲ್ಲಿರುವ ಜರ್ಮನಿ, ಜಪಾನ್,
ಫ್ರಾನ್ಸ್, ಪೋಲೆಂಡ್, ಯುಕೆ ಮತ್ತು ರಷ್ಯಾ ಸೇರಿದಂತೆ ಆಯ್ದ ದೇಶಗಳ ರಾಯಭಾರಿಗಳಿಗೆ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಮಾಹಿತಿ ನೀಡಿದರು.
ಕಾರ್ಯದರ್ಶಿ ಮಿಶ್ರಿ ಅವರು ಚೀನಾ ಮತ್ತು ಕೆನಡಾ ಸೇರಿದಂತೆ ಜಿ-20 ದೇಶಗಳ ರಾಯಭಾರಿಗಳಿಗೆ 30 ನಿಮಿಷಗಳ ಕಾಲ ನಡೆದ ಸಭೆಯಲ್ಲಿ ಮಾಹಿತಿ ನೀಡಿದರು ಎಂದು ಮೂಲಗಳು ತಿಳಿಸಿವೆ.