ಮಯನ್ಮಾರ್, ಥೈಲ್ಯಾಂಡ್‌ನಲ್ಲಿ ಪ್ರಬಲ ಭೂಕಂಪನ: ಭಾರತೀಯರಿಗಾಗಿ ಸಹಾಯವಾಣಿ ಆರಂಭ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಯನ್ಮಾರ್ ಹಾಗೂ ಥೈಲ್ಯಾಂಡ್‌ನಲ್ಲಿ ಉಂಟಾದ ಪ್ರಬಲ ಭೂಕಂಪದಿಂದ ಹಲವಾರು ಜೀವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದರ ಜೊತೆಗೆ ಥೈಲ್ಯಾಂಡ್​ನಲ್ಲಿನ ಭಾರತೀಯರಿಗಾಗಿ ಸಹಾಯವಾಣಿ (ಹೆಲ್ಪ್​ಲೈನ್) ತೆರೆಯಲಾಗಿದೆ.

ಥಾಯ್ಲೆಂಡ್​ನ ಪ್ರಬಲ ಭೂಕಂಪ ಸಂಭವಿಸಿದ್ದು, ಇದು ರಿಕ್ಟರ್‌ ಮಾಪಕದಲ್ಲಿ 7.7 ರಷ್ಟು ತೀವ್ರತೆ ದಾಖಲಾಗಿದೆ. ಬ್ಯಾಂಕಾಕ್​ನಲ್ಲಿ ನಿರ್ಮಾಣ ಹಂತದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದಿದೆ. ಭೂಕಂಪದಿಂದ ಇಲ್ಲಿವರೆಗೆ 7 ಜನರನ್ನು ರಕ್ಷಣೆ ಮಾಡಲಾಗಿದೆ ಎಂದು ಹೇಳಲಾಗಿದೆ. ಜೀವ ಕಳೆದುಕೊಂಡವರ ಸಂಖ್ಯೆ 15ಕ್ಕಿಂತ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ.

ಪ್ರಬಲವಾದ ಭೂಕಂಪ ಸಂಭವಿಸಿದ್ದರಿಂದ ಥೈಲ್ಯಾಂಡ್‌ ಪ್ರಧಾನಿ ಪೇಟೊಂಗ್ಟಾರ್ನ್ ಶಿನವಾತ್ರಾ ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ. ಮೆಟ್ರೋ ಹಾಗೂ ರೈಲು ಸೇವೆಗಳನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ.

ಇದೀಗ ಮಯನ್ಮಾರ್, ಥೈಲ್ಯಾಂಡ್‌, ಬ್ಯಾಂಕಾಕ್‌ನಲ್ಲಿ ಭಾರತೀಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಹೀಗಾಗಿ ಅಲ್ಲಿನ ಭಾರತೀಯರಿಗೆ ಸಮಸ್ಯೆ ಆದ್ರೆ, ತಕ್ಷಣಕ್ಕೆ ಸ್ಪಂದಿಸಲು ಸಹಾಯವಾಣಿಯನ್ನು ಇದೀಗ ತೆರೆಯಲಾಗಿದೆ. ಸಿಲುಕಿರುವ ಯಾವುದೇ ಭಾರತೀಯರು ಸಹಾಯವಾಣಿ ಮೂಲಕ ಸಂಪರ್ಕ ಮಾಡಬಹುದು.

ಥೈಲ್ಯಾಂಡ್​ನಲ್ಲಿರುವ ಭಾರತೀಯರಿಗೆ ಹೆಲ್ಪ್​ಲೈನ್

+66 6188 19218

ಕನ್ನಡ ಹಾಗೂ ಥಾಯ್ ಭಾಷೆಯಲ್ಲಿ ಸಹಾಯವಾಣಿ

ಮೋಹನ್- +66 899012366

ತುರ್ತು ನಂಬರ್

1669

ರಾಷ್ಟ್ರೀಯ ವಿಪತ್ತು ಎಚ್ಚರಿಕೆ ಕೇಂದ್ರದ ನಂಬರ್

02-399-4114

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!