ಉತ್ತರ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಪ್ರಬಲ ಸ್ಫೋಟ: 12 ಜನರ ಸಾವು 20 ಜನರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಉತ್ತರ ಪ್ರದೇಶದ ರಾಸಾಯನಿಕ ಕಾರ್ಖಾನೆಯಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು ಘಟನೆಯಲ್ಲಿ 12 ಜನರು ಸಾವನ್ನಪ್ಪಿದ್ದು 20 ಜನರು ಗಾಯಗೊಂಡಿದ್ದಾರೆ.

ಉತ್ತರಪ್ರದೇಶದ ಹಾಪುರ್‌ನಲ್ಲಿರುವ ರೂಹಿ ರಾಸಾಯನಿಕ ಕಾರ್ಖಾನೆಯಲ್ಲಿರುವ ಬಾಯ್ಲರ್‌ ತೀವ್ರವಾಗಿ ಸ್ಫೋಟಿಸಿದ್ದು ಹತ್ತು ಕಿಲೋಮೀಟರ್‌ ದೂರದವರೆಗೂ ಪ್ರಬಲ ಸದ್ದು ಕೇಳಿದೆ ಎಂದು ಮೂಲಗಳು ವರದಿ ಮಾಡಿದೆ.

ಆಟಿಕೆ ಬಂದೂಕುಗಳಲ್ಲಿ ಬಳಸುವ ಗನ್‌ಪೌಡರ್‌ ಕಾರಣವಾಗಿರಬಹುದು ಎಂದು ಊಹಿಸಲಾಗಿದ್ದು ಸ್ಥಳದಲ್ಲಿ ಕೆಲವು ಉದ್ದನೆಯ ಪ್ಲಾಸ್ಟಿಕ್‌ ಕಾಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಈ ಕಾಟ್ರಿಡ್ಜ್‌ ಗಳನ್ನು ಕಾರ್ಖಾನೆಯಲ್ಲಿಯೇ ತಯಾರಿಸಲಾಗಿದೆ, ತಯಾರಿಕೆಯಲ್ಲಿ ಗನ್‌ ಪೌಡರ್‌ ಬಳಸಿರುವುದೇ ಸ್ಫೋಟಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಗಳಲ್ಲಿ ಪತ್ತೆಯಾಗಿದೆ.

ಘಟನೆಯಲ್ಲಿ 12 ಮಂದಿ ಸಾವನ್ನಪ್ಪಿದ್ದು 20 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸೆಕ್ಷನ್ 304 (ಅಪರಾಧೀಯ ನರಹತ್ಯೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!