ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಿಪುರುಷ್ ಸಿನಿಮಾ ಒಂದು ಕಡೆಯಿಂದ ಭರ್ಜರಿ ಕಲೆಕ್ಷನ್ ಮಾಡ್ತಾ ಇದ್ರೆ ಇನ್ನೊಂದು ಕಡೆಯಿಂದ ಸಾಕಷ್ಟು ಟ್ರೋಲ್ ಹಾಗೂ ಮೀಮ್ಸ್‌ನ್ನು ಎದುರಿಸುತ್ತಿದೆ.
ಆದರೂ ಪ್ರಭಾಸ್‌ಗೆ ಫ್ಯಾನ್ಸ್ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ಲೇಡಿ ಲಕ್ ಪ್ರಭಾಸ್ ಜೊತೆಗಿದೆ. ಜಪಾನ್‌ವರೆಗೂ ಪ್ರಭಾಸ್ ಫ್ಯಾನ್ಸ್ ಇದ್ದಾರೆ ಎಂದರೆ ನಂಬಲೇಬೇಕು. ಪ್ರಭಾಸ್ ಮಹಿಳಾ ಅಭಿಮಾನಿಯೊಬ್ಬರು ಆದಿಪುರುಷ್ ನೋಡೋದಕ್ಕೆ ಟೋಕ್ಯೋದಿಂದ ಸಿಂಗಾಪುರಕ್ಕೆ ಬಂದಿದ್ದಾರೆ.
ಟೋಕ್ಯೋದಿಂದ ಸಿಂಗಾಪುರ ಬರೋಬ್ಬರಿ 5,500 ಕಿ.ಮೀ ದೂರವಿದೆ. ಅಲ್ಲದೇ ಈ ಅಭಿಮಾನಿ ತೆಲುಗಿನಲ್ಲಿ ಮಾತನಾಡ್ತಾರೆ. ಅವರು ಮಾತನಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ತಮ್ಮನ್ನು ತಾವು ಪ್ರಭಾಸ್‌ನ ಡೈ ಹಾರ್ಡ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ.
https://twitter.com/GskMedia_PR/status/1671747583814025217?s=20