ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ರೆಬೆಲ್ ಸ್ಟಾರ್ ಪ್ರಭಾಸ್ ಹುಟ್ಟುಹಬ್ಬ. ಅಭಿಮಾನಿಗಳು ಫುಲ್ ಖುಷಿಯಲ್ಲಿ ಪ್ರಭಾಸ್ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ಸೇವಾ ಕಾರ್ಯಕ್ರಮ, ವಿಶೇಷ ಕಾರ್ಯಕ್ರಮಗಳ ಮೂಲಕ ಸದ್ದು ಮಾಡುತ್ತಿದ್ದಾರೆ.
ಹೀಗಾಗಿ ಇಂದು ಪ್ರಭಾಸ್ ಹುಟ್ಟುಹಬ್ಬದ ಪ್ರಯುಕ್ತ ಎರಡು ತೆಲುಗು ರಾಜ್ಯಗಳ ಹಲವು ಥಿಯೇಟರ್ ಗಳಲ್ಲಿ ಬಿಲ್ಲಾ ಸಿನಿಮಾದ ವಿಶೇಷ ಶೋಗಳು ನಡೆದವು. ಥಿಯೇಟರ್‌ಗಳತ್ತ ಬಂದ ಅಭಿಮಾನಿಗಳು ಅತಿಯಾದ ಉತ್ಸಾಹವನ್ನು ತೋರಿದ್ದಾರೆ. ಸಿನಿಮಾ ಶುರುವಾದ ಮೇಲೆ ಅಭಿಮಾನಿಳ ಶಿಳ್ಳೆ, ಹರ್ಷೋದ್ಘಾರ ಅಷ್ಟಿಷ್ಟಲ್ಲ. ಕುರ್ಚಿಗಳ ಮೇಲೆ ಹತ್ತಿ ನೃತ್ಯ ಮಾಡಿದ್ದರಿಂದ ಚಿತ್ರಮಂದಿರಗಳಲ್ಲಿ ಹಲವು ಕುರ್ಚಿಗಳು ಧ್ವಂಸಗೊಂಡಿವೆ. ಈ ಬಗ್ಗೆ ರಂಗಮಂದಿರದ ಆಡಳಿತ ಮಂಡಳಿ ಗಂಭೀರವಾಗಿದ್ದು, ಅಭಿಮಾನಿ ಬಳಗದ ಮುಖಂಡರ ಜತೆ ಸಂಪರ್ಕದಲ್ಲಿದೆ.
ಅಲ್ಲದೆ, ತಾಡೇಪಲ್ಲಿಗುಡೆಂನ ಥಿಯೇಟರ್‌ನಲ್ಲಿ ಅಭಿಮಾನಿಗಳು ಪಟಾಕಿಗಳನ್ನು ಸಿಡಿಸಿದ್ದಾರೆ. ಇದರಿಂದ ಕೆಲ ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಿಂದ ಥಿಯೇಟರ್ ಆಡಳಿತ ಮಂಡಳಿ ಸಿಟ್ಟಿಗೆದ್ದಿದೆ.