ವಯನಾಡು ದುರಂತಕ್ಕೆ ಮನಮಿಡಿದ ಪ್ರಭಾಸ್‌ ಹೃದಯ ,ಎರಡು ಕೋಟಿ ರೂಪಾಯಿ ದೇಣಿಗೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಟಾಲಿವುಡ್ ನಟ ಪ್ರಭಾಸ್ ಕೂಡ ಕೇರಳ ಮುಖ್ಯಮಂತ್ರಿ ಪರಿಹಾರನಿಧಿಗೆ 2 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಮೂಲಕ ವಯನಾಡು ಜನರ ಸಹಾಯಕ್ಕೆ ನಿಂತಿದ್ದಾರೆ.

ವಯನಾಡಿನಲ್ಲಿ ನಡೆದ ದುರಂತದಲ್ಲಿ ಸುಮಾರು 400 ಜನರು ಮೃತಪಟ್ಟಿದ್ದಾರೆ. 150ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದು, ಅವರನ್ನು ಹಡುಕುವ ಕೆಲಸ ಆಗುತ್ತದೆ. ಅವರು ಬದುಕಿರುವ ಯಾವುದೇ ಸೂಚನೆ ಇಲ್ಲ. ಈ ಘಟನೆಗೆ ಅನೇಕರು ಕಂಬನಿ ಮಿಡಿದಿದ್ದಾರೆ. ಜೊತೆಗೆ ಪರಿಹಾರಕ್ಕೆ ನೆರವಾಗಲು ಹಣ ನೀಡುತ್ತಿದ್ದಾರೆ. ಕೇರಳದ ನೆರೆಯ ರಾಜ್ಯದವರೂ ಸಹಾಯಕ್ಕೆ ನಿಂತಿದ್ದಾರೆ.

ಅಲ್ಲು ಅರ್ಜುನ್ ಅವರು 50 ಲಕ್ಷ ರೂಪಾಯಿ, ಚಿರಂಜೀವಿ, ರಾಮ್ ಚರಣ್ ತಲಾ 1 ಕೋಟಿ ರೂಪಾಯಿ ನೀಡಿದ್ದಾರೆ. ರಶ್ಮಿಕಾ ಮಂದಣ್ಣ ಅವರು 10 ಲಕ್ಷ ರೂಪಾಯಿ ಹಣವನ್ನು ಪರಿಹಾರ ನಿಧಿಗೆ ನೀಡಿದ್ದಾರೆ. ಇದನ್ನು ಸರ್ಕಾರ ಪರಿಹಾರ ಕಾರ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದೆ. ಸೆಲೆಬ್ರಿಟಿಗಳು ನೀಡಿರುವ ಹಣದಿಂದ ಆಹಾರ, ಬಟ್ಟೆ ಖರೀದಿಗೆ ಸಹಾಯ ಆಗಲಿದೆ. ಇದರ ಜೊತೆಗೆ ಸ್ಥಳೀಯರು ಆಹಾರ, ಬಟ್ಟೆ ಹಾಗೂ ಮೆಡಿಕಲ್ ಕಿಟ್​ಗಳನ್ನು ನೀಡುವ ಕೆಲಸ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!