ಬಾಕ್ಸ್​ ಆಫೀಸ್​ನಲ್ಲಿ ಕಮಾಲ್ ಮಾಡದ ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್​’ ಒಟಿಟಿಯಲ್ಲಿ ಕಮಾಲ್ ಮಾಡುವುದೇ?

ಹೊಸದಿಗಂತ ಡಿಜಿಟಲ್ ಡೆಸ್ಕ್

ನಟ ಪ್ರಭಾಸ್​ ಹಾಗೂ ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್​’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಸೋಲು ಕಂಡಿದ್ದು, ಇದೀಗ ಒಟಿಟಿ ಮೂಲಕ ಜನರ ಹತ್ತಿರ ಬರಲು ಸಿದ್ಧವಾಗಿದೆ.
ಮಾರ್ಚ್​ 11ರಂದು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದ ‘ರಾಧೆ ಶ್ಯಾಮ್​’ವನ್ನು ಪ್ರೇಕ್ಷಕರು ಅಷ್ಟಾಗಿ ಇಷ್ಟಪಡಲೇ ಇಲ್ಲ.ಹೀಗಾಗಿ ಬಾಕ್ಸ್​ ಆಫೀಸ್​ನಲ್ಲಿ ನೆಲಕಚ್ಚಿತು.
ಹೀಗಾಗಿ ಸಿನಿಮಾ ತೆರೆಕಂಡು ಕೇವಲ 20 ದಿನಕ್ಕೆ ಏಪ್ರಿಲ್​ 1ರಂದು ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಸಿನಿಮಾ ಪ್ರಸಾರ ಆರಂಭಿಸುತ್ತಿದೆ. ಈ ಚಿತ್ರವನ್ನು ಒಟಿಟಿ ಮಂದಿ ಇಷ್ಟಪಡುತ್ತಾರೋ ಎನ್ನುವ ಕುತೂಹಲ ಅಭಿಮಾನಿಗಳದ್ದು.
ರಾಧ ಕೃಷ್ಣ ಕುಮಾರ್​ ಅವರು ಈ ಚಿತ್ರಕ್ಕೆ ಆಯಕ್ಷನ್​ ಕಟ್​ ಹೇಳಿದ್ದಾರೆ. ಯುವಿ ಕ್ರಿಯೇಷನ್ಸ್​ ಸಿನಿಮಾಗೆ ಬಂಡವಾಳ ಹೂಡಿದೆ. ಈ ಚಿತ್ರದ ಬಹುತೇಕ ಶೂಟಿಂಗ್​ ಯುರೋಪ್​ನಲ್ಲಿ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!