ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭಾಸಿಮ್ರನ್, ನಾಯಕ ಶಿಖರ್ ಧವನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ 197 ರನ್ ಸಿಡಿಸಿದೆ. ರಾಜಸ್ಥಾನ ರಾಯಲ್ಸ್ ಗೆ ಬೃಹತ್ ಮೊತ್ತ ಟಾರ್ಗೆಟ್ ನೀಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಭಾಸಿಮ್ರನ್ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 90 ರನ್ ಸಿಡಿಸಿತು. ಪ್ರಭಾಸಿಮ್ರನ್ ಸಿಂಗ್ 34 ಎಸೆತದಲ್ಲಿ 60 ರನ್ ಕಾಣಿಕೆ ನೀಡಿದರು.
ಇತ್ತ 1 ರನ್ ಸಿಡಿಸಿದ ಭಾನುಕಾ ರಾಜಪಕ್ಸ್ ರಿಟೈರ್ಡ್ ಹರ್ಟ್ ಆದರು. ಇತ್ತ ಧವನ್ ಜೊತೆ ಜಿತೇಶ್ ಶರ್ಮಾ ಅಬ್ಬರಿಸುವ ಸೂಚನೆ ನೀಡಿದರು. ಆದರೆ 16 ಎಸೆತದಲ್ಲಿ 27 ರನ್ ಸಿಡಿಸಿ ಜಿತೇಶ್ ಶರ್ಮಾ ವಿಕೆಟ್ ಕೈಚೆಲ್ಲಿದರು. ಆದರೆ ಶಿಖರ್ ಧವನ್ ಹೋರಾಟ ಮುಂದುವರಿಸಿದರು. ಇತ್ತ ಸಿಕಂದರ್ ರಾಜಾ 1 ರನ್ ಸಿಡಿಸಿ ನಿರ್ಗಮಿಸಿದರು.
ಶಾರುಖ್ ಖಾನ್ 11 ರನ್ ಕಾಣಿಕೆ ನೀಡಿದರು. ಇತ್ತ ಶಿಖರ್ ಧವನ್ 56 ಎಸೆತದಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ಮೂಲಕ ಅಜೇಯ 86 ರನ್ ಸಿಡಿಸಿದರು. ಈ ಮೂಲಕ ಪಂಜಾಬ್ ಕಿಂಗ್ಸ್ 4 ವಿಕೆಟ್ ನಷ್ಟಕ್ಕೆ 197 ರನ್ ಸಿಡಿಸಿತು.