ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಭಸಿಮ್ರನ್ ಸಿಂಗ್ (91) ಅರ್ಧಶತಕ ಹಾಗೂ ಶ್ರೇಯಸ್ ಅಯ್ಯರ್ (45), ಜೋಶ್ ಇಂಗ್ಲಿಸ್ (30) ಹಾಗೂ ಶಶಾಂಕ್ ಸಿಂಗ್ (33) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಪಂಜಾಬ್ ಕಿಂಗ್ಸ್ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಸಿಡಿಲಬ್ಬರ ಬ್ಯಾಟಿಂಗ್ ಮಾಡಿ 237 ರನ್ಗಳ ಬೃಹತ್ ಗುರಿ ನೀಡಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ಮೊದಲ ಓವರ್ನಲ್ಲೇ ಪ್ರಿಯಾಂಶ್ (1) ವಿಕೆಟ್ ಬೇಗ ಕಳೆದುಕೊಂಡಿತು. 3ನೇ ಕ್ರಮಾಂಕದಲ್ಲಿ ಬಡ್ತಿ ಪಡೆದಯ ಬಂದ ಜೋಸ್ ಇಂಗ್ಲಿಸ್ 2ನೇ ವಿಕೆಟ್ಗೆ ಪ್ರಭಸಿಮ್ರನ್ ಸಿಂಗ್ ಜೊತೆ ಸೇರಿ 22 ಎಸೆತಗಳಲ್ಲಿ 48 ರನ್ ಸೇರಿಸಿದರು. ಇಂಗ್ಲಿಸ್ 30 ರನ್ಗಳಿಸಿ ಔಟ್ ಆದರು. ನಂತರ ಬಂದ ಶ್ರೇಯಸ್ ಅಯ್ಯರ್ ಕೂಡ ಅಬ್ಬರದಾಟವನ್ನ ಮುಂದುವರಿಸಿದರು.
ಅಯ್ಯರ್ 25 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 45 ರನ್ಗಳಿಸಿದರು. ಪ್ರಭಸಿಮ್ರನ್ ಸಿಂಗ್ 48 ಎಸೆತಗಳಲ್ಲಿ 6 ಬೌಂಡರಿ, 7 ಸಿಕ್ಸರ್ಗಳ ಸಹಿತ 91 ರನ್ಗಳಿಸಿ 19ನೇ ಓವರ್ನಲ್ಲಿ ಔಟ್ ಆಗಿ ಕೇವಲ 9 ರನ್ಗಳಿಂದ ಶತಕ ಮಿಸ್ ಮಾಡಿಕೊಂಡರು. ಕೊನೆಯಲ್ಲಿ ಅಬ್ಬರಿಸಿದ ಶಶಾಂಕ್ ಸಿಂಗ್ 15 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 33, ಮಾರ್ಕಸ್ ಸ್ಟೋಯಿನಿಸ್ 5 ಎಸೆತಗಳಲ್ಲಿ ಅಜೇಯ 15 ರನ್ಗಳಿಸಿದರು.