ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಕುರಿತು ಮಾಹಿತಿ ಮತ್ತು ನೆರವು ಪಡೆಯಲು ಬಳಸಲಾಗುತ್ತಿದ್ದ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆಯನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ.
ಪ್ರಸ್ತುತ ಚಾಲ್ತಿಯಲ್ಲಿರುವ 14408 ಸಂಖ್ಯೆಯು ಈ ತಿಂಗಳ 31 ರಂದು ರದ್ದಾಗಲಿದ್ದು, ನವೆಂಬರ್ 1, 2025 ರಿಂದ ಹೊಸ ಟೋಲ್-ಫ್ರೀ ಸಹಾಯವಾಣಿ ಸಂಖ್ಯೆ 1515 ಕಾರ್ಯಾರಂಭ ಮಾಡಲಿದೆ. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಈ ಮಾಹಿತಿಯನ್ನು ಪ್ರಕಟಿಸಿದೆ.
ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಆರ್ಥಿಕ ನೆರವು ನೀಡುವ ಈ ಪ್ರಮುಖ ಯೋಜನೆಯ ಕುರಿತು ಫಲಾನುಭವಿಗಳು ಮತ್ತು ಸಾರ್ವಜನಿಕರು ಇನ್ನು ಮುಂದೆ ತಮ್ಮ ಪ್ರಶ್ನೆಗಳು, ದೂರುಗಳು ಅಥವಾ ಮಾಹಿತಿ ಪಡೆಯಲು ನೂತನ ಸಂಖ್ಯೆ 1515ಕ್ಕೆ ಕರೆ ಮಾಡಬಹುದಾಗಿದೆ.

