`ಸ್ಮೈಲ್ ಪ್ಲೀಸ್’: ವಿಕ್ರಮ್ ಲ್ಯಾಂಡರ್ ಫೋಟೋ ತೆಗೆದ ಪ್ರಗ್ಯಾನ್ ರೋವರ್, ಇಸ್ರೋ ಟ್ವೀಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೋ ಉಡಾವಣೆ ಮಾಡಿದ ಚಂದ್ರಯಾನ-3 ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಇಸ್ರೋ ವಿಜ್ಞಾನಿಗಳ ನಿರೀಕ್ಷೆಯಂತೆ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಲ್ಯಾಂಡರ್ ಮತ್ತು ರೋವರ್ ತಮ್ಮ ಕೆಲಸದಲ್ಲಿ ಮಗ್ನವಾಗಿವೆ. ಈ ನಿಟ್ಟಿನಲ್ಲಿ ಪ್ರಗ್ಯಾನ್‌ ರೋವರ್‌ ಕಳುಹಿಸಿದ ವಿಕ್ರಮ್ ಲ್ಯಾಂಡರ್ ಚಿತ್ರಗಳನ್ನು ಇಸ್ರೋ ಹಂಚಿಕೊಂಡಿದ್ದು, ‘ಸ್ಮೈಲ್ ಪ್ಲೀಸ್’ ಎಂದು ಶೀರ್ಷಿಕೆ ನೀಡಿದೆ.

ಟ್ವೀಟ್‌ ಮಾಡಿದ ಇಸ್ರೋ..ರೋವರ್ ಬುಧವಾರ ಬೆಳಿಗ್ಗೆ ವಿಕ್ರಮ್ ಲ್ಯಾಂಡರ್‌ನ ಚಿತ್ರವನ್ನು ತೆಗೆದುಕೊಂಡಿತು. ರೋವರ್‌ನಲ್ಲಿ ಅಳವಡಿಸಲಾಗಿರುವ ನ್ಯಾವಿಗೇಷನ್ ಕ್ಯಾಮೆರಾಗಳಿಂದ ಈ ಫೋಟೋಗಳನ್ನು ತೆಗೆಯಲಾಗಿದೆ. ಅಲ್ಲದೆ, ನ್ಯಾವಿಗೇಷನ್ ಕ್ಯಾಮೆರಾಗಳನ್ನು ಎಲೆಕ್ಟ್ರೋ-ಆಪ್ಟಿಕ್ಸ್ ಸಿಸ್ಟಮ್ಸ್ ಅಭಿವೃದ್ಧಿಪಡಿಸಿದೆʼ ಎಂದು ಇಸ್ರೋ ಹೇಳಿದೆ.

ಇದೇ ವೇಳೆ.. ಚಂದ್ರನ ದಕ್ಷಿಣ ಧ್ರುವದಲ್ಲಿರುವ ಪ್ರಗ್ಯಾನ್ ರೋವರ್ ವಿವಿಧ ಧಾತುಗಳ ಸಂಯುಕ್ತಗಳನ್ನು ಪತ್ತೆ ಮಾಡಿದೆ. ಅಂಶಗಳನ್ನು ತನಿಖೆ ಮಾಡಲು ಪ್ರಗ್ಯಾನ್ ರೋವರ್‌ಗೆ ಲೇಸರ್-ಇಂಡ್ಯೂಸ್ಡ್ ಬ್ರೇಕ್‌ಡೌನ್ ಸ್ಪೆಕ್ಟ್ರೋಸ್ಕೋಪಿ (LIBS) ಉಪಕರಣವನ್ನು ಅಳವಡಿಸಲಾಗಿದೆ ಎಂದು ಇಸ್ರೋ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!