ಹೊಸದಿಗಂತ ಡಿಜಿಟಲ್ ಡೆಸ್ಕ್:
ಜರ್ಮನಿಯ ಮ್ಯೂನಿಚ್ ಏರ್ಪೋರ್ಟ್ ನಿಂದ ಬೆಂಗಳೂರಿಗೆ ಬರೋದಕ್ಕಾಗಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಲಗೇಜ್ ಕೂಡ ಚೆಕ್ ಇನ್ ಮಾಡಿದ್ದಾರೆ. ಇಂದೇ ಬೆಂಗಳೂರಿಗೆ ಆಗಮಿಸೋ ಸಾಧ್ಯತೆ ಇದೆ. ಹೀಗಾಗಿ ಅವರನ್ನು ಬಂಧಿಸೋದಕ್ಕಾಗಿ ಎಸ್‌ಐಟಿ ಅಧಿಕಾರಿಗಳು ಸಕಲ ಸಿದ್ಧತೆ ಕೈಗೊಂಡಿದ್ದಾರೆ.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್ ರೇವಣ್ಣ ಈಗಾಗಲೇ ಜರ್ಮನಿಯ ಮ್ಯೂನಿಕ್ ಏರ್ ಪೋರ್ಟ್ ಗೆ ಬಂದಿಳಿದ್ದಾರೆ.
2 ಟ್ರಾಲಿ ಬ್ಯಾಗ್ ಸಮೇತ ಅವರು ಮ್ಯೂನಿಕ್ ಏರ್ ಪೋರ್ಟ್ ಗೆ ಬಂದಿಳಿದ್ದು,ಲಗೇಜ್ ಚೆಕ್ ಇನ್ ಮಾಡಿರುವ ಮಾಹಿತಿ ಕೂಡ ಲಭ್ಯವಾಗಿದೆ. ಲುಫ್ತಾನ್ಸ್ ಏರ್ ಲೈನ್ಸ್ ವಿಮಾನದಲ್ಲಿ ಪ್ರಜ್ವಲ್ ರೇವಣ್ಣ ಇಂದು ಬೆಂಗಳೂರಿಗೆ ಬರುವುದು ಕನ್ಫರ್ಮ್ ಆಗಿದೆ.
ಹೀಗಾಗಿ ಸಂಸದ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಿದ ಕೂಡಲೇ ಎಸ್‌ಐಟಿ ಅಧಿಕಾರಿಗಳು ಬಂಧಿಸೋದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.