ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಜ್ವಲ್ ರೇವಣ್ಣ ಅವರನ್ನು ಎಸ್ ಐ ಟಿ ಅಧಿಕಾರಿಗಳು ಬಂಧಿಸಿ ಇಂದು ಬೆಂಗಳೂರಿನ 42ನೇ ಎಸಿ ಎಂ ಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ವಾದ ವಿವಾದಗಳ ನಂತರ ನ್ಯಾಯಾಲಯವು ಸಂಜೆ 4:15ಕ್ಕೆ ಆದೇಶ ಹೊರಡಿಸಲಿದೆ.
ಪ್ರಜ್ವಲ್ ರೇವಣ್ಣ ಪರವಾಗಿ ವಕೀಲ ಅರುಣ್ ಅವರು ವಾದಿಸಿದ್ದು, ಎಸ್ಐಟಿ ಪರ ಎಸ್ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿದರು.
ಬೆಂಗಳೂರಿನ 42ನೇ ಎಸಿಎಂ ಎಂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದ್ದು, ಎಸ್ಐಟಿಗೆ 15 ದಿನಗಳ ಕಾಲ ಕಸ್ಟಡಿಗೆ ನೀಡುತ್ತರ ಅಥವಾ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರ ಎಂದು 4. 15ಕ್ಕೆ ಪ್ರಜ್ವಲ್ ರೇವಣ್ಣ ಅವರ ಭವಿಷ್ಯ ನಿರ್ಧಾರವಾಗಲಿದೆ.
ಈ ವೇಳೆ ಕೋರ್ಟ್ ಹಾಲ್ ಅಲ್ಲಿ ಜನರು ಕಿಕ್ಕಿರಿದು ತುಂಬಿದ್ದು, ಹೊರಗಡೆ ತೆರಳಲು ಸಂಚಾರ ದಟ್ಟಣೆ ಉಂಟಾಗಿದೆ.