ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ತೂಕದ ಕಾರಣವಾಗಿ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹರಾಗಿದ್ದರು. ಈ ಬಗ್ಗೆ ಸಿನಿ ತಾರೆಯರು ಕಮೆಂಟ್ ಮಾಡಿದ್ದು, ವಿನೇಶ್ ನೀವು ಯಾವಾಗಲೂ ವಿನ್ನರ್ ಎಂದು ಹೇಳಿದ್ದರು. ಆದರೆ ನಟ ಪ್ರಕಾಶ್ ರೈ ತೂಕ ಹೆಚ್ಚಳದ ಹಿಂದೆ ಪ್ರಧಾನಿ ಮೋದಿ ಕೈವಾಡ ಇದೆ ಎನ್ನುವಂಥ ಪೋಸ್ಟ್ ಮಾಡಿದ್ದರು.
ಈ ಬಗ್ಗೆ ನಟ ಅಹಿಂಸ ಚೇತನ್ ದನಿಯೆತ್ತಿದ್ದಾರೆ. ವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರೈ ಪೋಸ್ಟ್ ಸಜೆಸ್ಟ್ ಮಾಡುತ್ತೆ. ಇದು ಸಣ್ಣತನ. ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು, ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರಾಯ್ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರೈ ಒಳ್ಳೆಯ ನಟ. ಆದರೆ, ಕೆಟ್ಟ ಹೋರಾಟಗಾರ ಎಂದು ಟೀಕಿಸಿದ್ದಾರೆ.
ಸದಾಕಾಲ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸುತ್ತಲೇ ಬಂದಿದ್ದ ಚೇತನ್ ಅವರು, ಇದೀಗ ಇದ್ದಕ್ಕಿದ್ದಂತೆ ಮೋದಿ ಪರ ಬ್ಯಾಟಿಂಗ್ ಮಾಡಿರುವುದು ಹಲವರ ಹುಬ್ಬೇರುವಂತೆ ಮಾಡಿದೆ.
Prakash Rai’s post suggests PM Modi is at fault for Vinesh Phogat’s disqualification
Petty
Just as those who blindly credit Modi for all of India’s gains are ignorant, so are those like Rai who blame all of India’s problems on PM
Prakash Rai is a good actor but a bad activist pic.twitter.com/ljBqr0Gt18
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) August 8, 2024