ಹೊಸದಿಗಂತ ವರದಿ, ಕಲಬುರಗಿ:
ಬಸವಕಲ್ಯಾಣದ ರುದ್ರಮುನಿ ಅಭಿನವ ಶ್ರೀ ಮಠಕ್ಕೆ ಭೇಟಿ ನೀಡಲು ತೆರಳುತ್ತಿದ್ದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹಾಗೂ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರನ್ನು ಕಲಬುರಗಿ- ಬೀದರ್ ಪೊಲೀಸರು ಕಲಬುರಗಿ ಜಿಲ್ಲೆಯ ಗಡಿ ಗ್ರಾಮ ವಿ.ಕೆ. ಸಲಗರ ಬಳಿ ತಡೆದಿದ್ದಾರೆ.
ಜೂನ್ 12 ರಂದು ಮೂಲ ಅನುಭವ ಮಂಟಪ ರಕ್ಷಣೆಗಾಗಿ ಮಠಾಧೀಶರ ನಡೆ ಬಸವಕಲ್ಯಾಣದ ಕಡೆ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲು ಬಸವಕಲ್ಯಾಣದ ರುದ್ರಮುನಿ ಅಭಿನವ ಶ್ರೀ ಮಠಕ್ಕೆ ಭೇಟಿ ನೀಡಲು ಪ್ರಮೋದ್ ಮುತಾಲಿಕ್ ಹಾಗೂ ಸಿದ್ದಲಿಂಗ ಸ್ವಾಮಿ ತೆರಳುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ಅವರಿಬ್ಬರನ್ನು ಪೊಲೀಸ್ ರು ತಡೆದು ವಾಪಸ್ ಕಳುಹಿಸಿದ್ದಾರೆ.
ಜೂನ್ 4 ರಿಂದ 12 ರವರೆಗೆ ಪ್ರಮೋದ್ ಮುತಾಲಿಕ್ ಹಾಗೂ ಸಿದ್ದಲಿಂಗ ಸ್ವಾಮಿ ಅವರಿಬ್ಬರನ್ನು ಬೀದರ್ ಜಿಲ್ಲೆ ಗಡಿ ಪ್ರವೇಶಕ್ಕೆ ನಿಷೇಧ ಹೇರಿ ಬೀದರ್ ಜಿಲ್ಲಾಡಳಿತ ಆದೇಶ ಹೊರಡಿಸಿದೆ.