ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಅವರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಯಿತು.
ಶುಕ್ರವಾರ ಸಂಜೆ ಬಿಹಾರದ ಅರ್ರಾದಲ್ಲಿ ನಡೆದ ಸಾರ್ವಜನಿಕ ಸಭೆಯ ಸಂದರ್ಭ ಪ್ರಶಾಂತ್ ಕಿಶೋರ್ ಅಸ್ವಸ್ಥರಾಗಿದ್ದಾರೆ.
ರೋಡ್ ಶೋನಲ್ಲಿದ್ದಾಗ, ಮಹಿಳೆಯೊಬ್ಬರನ್ನು ರಕ್ಷಿಸಲು ಪ್ರಯತ್ನಿಸುವ ವೇಳೆ ಎದೆಗೆ ಗಾಯವಾಯಿತು. ಇದಾದ ಬಳಿಕ ಜನಸಮೂಹವನ್ನ ಉದ್ದೇಶಿಸಿ ಮಾತನಾಡಲು ವೇಳೆ ಎದೆ ನೋವು ಕಾಣಿಸಿಕೊಂಡಿತು. ಬೆಂಬಲಿಗರು ಅವರನ್ನು ವೇದಿಕೆಯಿಂದ ಕೆಳಗಿಳಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ನಂತರ ಅವರನ್ನು ಪಾಟ್ನಾಗೆ ಸ್ಥಳಾಂತರಿಸಲಾಯಿತು.