ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಸಂಸದ ಪ್ರತಾಪ್ ಸಿಂಹ (MP Pratapsimha) ಅವರು ಹೆಸರು ಕೆಡಿಸಿಕೊಂಡಿದ್ದಾರೆ. ಅವರಿಗೆ ಟಿಕೆಟ್ ಕೊಡ್ತಿಲ್ಲ ಅನಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.
ಚಾಮರಾಜನಗರದಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು, ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ನಡುವೆ ಹೊಂದಾಣಿಕೆ ರಾಜಕಾರಣ (Adjustment Politics) ನಡೆದಿದೆ ಎಂಬ ಮೈಸೂರು ಸಂಸದ ಪ್ರತಾಪ್‌ಸಿಂಹ ಅವರ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಯಾವನೋ ಒಬ್ಬ ದಾರಿಯಲ್ಲಿ ಹೋಗುವವರು ಹೇಳಿದ್ರೆ ಆಗಲ್ಲ. ಈಗ ಪ್ರತಾಪ್ ಸಿಂಹ ಅವರಿಗೆ ಬಿಜೆಪಿಯವರು ಟಿಕೆಟ್ ನಿರಾಕರಿಸಿದ್ದಾರಲ್ಲಾ ಯಾಕೆ? ನಾನು ಹೊಂದಾಣಿಕೆ ಮಾಡಿದ್ನಾ? ಯದುವೀರ್ ಒಡೆಯರ್ (Yaduveer Odeyar) ಅವರಿಗೆ ನಾನು ಬಿಜೆಪಿಗೆ ಹೋಗಿ ನಿಲ್ಲು ಅಂತ ಹೇಳಿದ್ನಾ? ಪ್ರತಾಪ್ ಸಿಂಹ ಹೆಸರು ಕೆಡಿಸಿಕೊಂಡಿದ್ದಾರೆ ಅಂತ ಅವರಿಗೆ ಟಿಕೆಟ್ ಕೊಡ್ತಿಲ್ಲ ಅನ್ಸುತ್ತೆ. ಅದನ್ನು ಬಿಟ್ಟು ನೀವೇ ಸೃಷ್ಟಿ ಮಾಡಿ ಹೊಂದಾಣಿಕೆ ರಾಜಕೀಯ ಅಂತ ಹೇಳಿದ್ರೆ ಹೇಗೆ ಎಂದು ಅವರು ಪ್ರಶ್ನೆ ಮಾಡಿದರು.
ʻʻನನಗೆ ಟಿಕೆಟ್ ಕೊಟ್ರೆ ಸಿಎಂ ಕುರ್ಚಿ ಹೋಗುತ್ತದೆʼʼ ಎನ್ನುವ ಪ್ರತಾಪ್ ಸಿಂಹ ಹೇಳಿಕೆಗೆ ಲೇವಡಿಯ ಪ್ರತಿಕ್ರಿಯೆ ನೀಡಿದ ಅವರು, ʻʻಓಹ್… ಪ್ರತಾಪ್ ಸಿಂಹ ಎರಡು ಸಲ ಎಂಪಿ ಆಗಿದ್ದ ಅಲ್ವಾ? ಯಾಕೆ ನನ್ನ ಕುರ್ಚಿ ಅಲುಗಾಡಲಿಲ್ಲ.?ʼʼ ಎಂದು ಕೇಳಿದರು.
ʻʻನಮಗೆ ಬಿಜೆಪಿ ಯಾರನ್ನ ಅಭ್ಯರ್ಥಿ ಮಾಡ್ತಾರೆ ಎನ್ನುವ ಪ್ರಶ್ನೆ ಇಲ್ಲವೇ ಇಲ್ಲ. ನಾವು ಬಿಜೆಪಿಯನ್ನು ಸೋಲಿಸಬೇಕು ಅಷ್ಟೇ.ʼʼ. ನಾವು ಕಾಂಗ್ರೆಸ್ ಬಡವರ ಪರ ನೀಡಿರುವ ಅಭಿವೃದ್ಧಿಗಳ ಮೇಲೆ ಅವಲಂಬನೆ ಆಗಿದ್ದೇವೆ ಹೊರತು ಬಿಜೆಪಿ ಅಭ್ಯರ್ಥಿ ಮೇಲೆ ಅಲ್ಲ. ನಾವು ಬಿಜೆಪಿ ನ ಸೋಲಿಸುತ್ತೇವೆ ಅಷ್ಟೆʼʼ ಎಂದು ಚಾಮರಾಜನಗರದ ಹೆಗ್ಗವಾಡಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದರು.