ಕೈಕೊಟ್ಟ ಮುಂಗಾರು:ಕಾಮಧೇನು ಸಂಸ್ಥೆಯಿಂದ ಮಳೆಗಾಗಿ ಪೂಜೆ

ಹೊಸದಿಗಂತ ವರದಿ ಬಾಗಲಕೋಟೆ:

ಮುಂಗಾರು ಮಳೆ ಕೈಕೊಟ್ಟಿದ್ದು, ಮುಚಖಂಡಿ ಗ್ರಾಮದ ವಿರಭದ್ರೇಶ್ವರ ದೇವಸ್ಥಾನದಲ್ಲಿ ಇಂದು ಮಳೆಗಾಗಿ ವಿಶೇಷ ಪೂಜೆ ಮಹಾ ಮಂಗಳಾರತಿ ಮಾಡಿ ಪ್ರಾರ್ಥಿಸಿ ಪ್ರಸಾದ ವಿತರಿಸಲಾಯಿತು.

ರಾಜ್ಯದಲ್ಲಿ ಮಳೆ ಇಲ್ಲದೆ ನದಿಗಳು ಬತ್ತಿವೆ. ರೈತರಿಗೆ ಸಂಕಷ್ಟ ಶುರುವಾಗಿದ್ದು, ಜಾನುವಾರುಗಳಿಗೆ ನೀರು ಇಲ್ಲದೆ ಪರದಾಡುವಂತಾಗಿದೆ. ಜನರಿಗೆ ಕುಡಿಯುವ ನೀರು ದೊರಕುತ್ತಿಲ್ಲ, ಹೀಗಾಗಿ ಕಾಮಧೇನು ಸಂಸ್ಥೆ ವತಿಯಿಂದ ವಿರಭದ್ರೇಶ್ವರ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸಲಾಯಿತು. ನಾಡಿನ ಜನತೆ ರೈತರು ಮಳೆಯಿಂದ ಸಮೃದ್ದಿಯಾಗಲಿ ಎಂದು ಪೂಜೆ ಮಾಡಲಾಯಿತು.

ಕಾಮಧೇನು ಸಂಸ್ಥೆ ಅಧ್ಯಕ್ಷ ರವಿ ಕುಮಟಗಿ, ಕಾರ್ಯದರ್ಶಿ ವಿಜಯ ಸುಲಾಖೆ, ಅಶೋಕ ಮುತ್ತಿನಮಠ, ಶಿವು ಮೇಲ್ನಾಡ, ಕಳಕಪ್ಪ ಬಾದೋಡಗಿ,ಗುರು ಅನಗವಾಡಿ,ಅರುಣ ಲೊಕಾಪೂರ, ಶಂಕರ ಮಗಜಿ,ಸಂಜು ಡಿಗ್ಗಿ, ರೈತ ಮುಖಂಡರು ಬಸಪ್ಪ ಸೊಗಿ, ಬಲ್ಮಿ , ಕಿರಣ ರಾಠೋಡ,ಬಸವರಾಜ ಕಳಸಾ, ಯಮನೂರಿ ಕಮಿತಕರ, ಹಿರಾಲಾಲ ಅಷ್ಟಕರ ಹಾಗೂ ಇನ್ನಿತರರು ಭಾಗವಹಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!