ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಹಾರದ ವಿಷಯದಲ್ಲಿ ಮುಂಜಾಗ್ರತೆ ವಹಿಸುವಂತೆಯೇ ಗಾಳಿಯ ಉಸಿರಾಟದ ವಿಚಾರದಲ್ಲೂ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ನಾವು ಉಸಿರಾಡುವ ಗಾಳಿಯಲ್ಲಿ ಹಾನಿಕಾರಕ ಸೂಕ್ಷ್ಮಾಣುಜೀವಿಗಳು ಇರುತ್ತವೆ. ಬಾಯಿ ಮತ್ತು ಮೂಗಿನ ಮೂಲಕ ಅನೇಕ ರೀತಿಯ ರೋಗಾಣುಗಳು ದೇಹವನ್ನು ಪ್ರವೇಶಿಸಿ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ.
ಗಾಳಿಯು ಆಹಾರ ಅಥವಾ ನೀರಿಗಿಂತ ಹೆಚ್ಚು ಮುಖ್ಯವಾದುದ್ದು ಗಾಳಿಯಿಲ್ಲದೆ ಜೀವನವೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯವು ಅನಾರೋಗ್ಯ ಮತ್ತು ವೈದ್ಯಕೀಯ ವೆಚ್ಚವನ್ನು ಹೆಚ್ಚಿಸಿದೆ. ಕಣ್ಣು, ಚರ್ಮ, ಉಸಿರಾಟದ ಕಾಯಿಲೆಗಳ ಜತೆಗೆ ಕ್ಯಾನ್ಸರ್ ನಂತಹ ಅಪಾಯಕಾರಿ ಕಾಯಿಲೆಗಳು ಬರುತ್ತಿವೆ. ಕಲಬೆರಕೆ ಇಂಧನಗಳ ಬಳಕೆ, ಪ್ಲಾಸ್ಟಿಕ್, ಹಳೆಯ ಟೈರುಗಳು, ಕೈಗಾರಿಕಾ ತ್ಯಾಜ್ಯ ಮತ್ತು ಇತರ ಕಸವನ್ನು ಜನಪ್ರದೇಶದಲ್ಲಿ ಸುಡುವುದರಿಂದ ಗಾಳಿ ಕಲುಷಿತಗೊಳ್ಳುತ್ತಿದೆ.
ಸೂರ್ಯೋದಯಕ್ಕೂ ಮುನ್ನ ವಾತಾವರಣ ತಾಜಾವಾಗಿರುತ್ತದೆ. ಆ ಸಮಯದಲ್ಲಿ ಮನೆಯ ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಟ್ಟರೆ ಮನೆಯೊಳಗಿನ ಗಾಳಿಯನ್ನು ಸ್ವಚ್ಛಗೊಳಿಸಬಹುದು. ಮಾರಣಾಂತಿಕ ಅಪಾಯದಿಂದ ಹೊರಬರಲು ಹೊರಗಿನ ಗಾಳಿಯಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡಬೇಕು ಮತ್ತು ಗಾಳಿಯ ಗುಣಮಟ್ಟವನ್ನು ಹೆಚ್ಚಿಸಬೇಕು.
ಮೂಗಿನ ಹೊಳ್ಳೆಗಳ ಮೂಲಕ ದೀರ್ಘ ಉಸಿರನ್ನು ತೆಗೆದುಕೊಳ್ಳುವಂತಹ ಸಾಂಪ್ರದಾಯಿಕ ಉಸಿರಾಟದ ತಂತ್ರಗಳನ್ನು ಪ್ರಾಣಾಯಾಮದ ಮೂಲಕ ಕಲಿಯಬಹುದು. ಇದು ಮೂತ್ರಪಿಂಡಗಳಿಗೆ ಪ್ರಯೋಜನವನ್ನು ನೀಡುತ್ತದೆ. ಮಾಲಿನ್ಯ ಮುಕ್ತ ಗಾಳಿಯನ್ನು ಉಸಿರಾಡಲು ಮೂಗಿನ ಮಾಸ್ಕ್ ಧರಿಸುವುದು ಸ್ವಲ್ಪ ಮಟ್ಟಿಗೆ ಸಹಕಾರಿ.