ಮೇಷ
ವೃತ್ತಿಯಲ್ಲಿರುವವರಿಗೆ ಇಂದು ಅತ್ಯಂತ ಸಫಲ ದಿನ. ಜನಪ್ರಿಯತೆ, ಸ್ಥಾನೋನ್ನತಿ, ಧನಲಾಭ ಪಡೆಯುವಿರಿ. ಕೆಲಸದ ಒತ್ತಡ, ಉದ್ವಿಗ್ನತೆ ನಿವಾರಣೆ.
ವೃಷಭ
ಇಂದು ಅತಿಯಾಗಿ ಭಾವುಕತೆಯಿಂದ ವರ್ತಿಸುವಿರಿ. ಕೆಲವು ವಿಷಯಗಳು ಗೊಂದಲ ಸೃಷ್ಟಿಸುತ್ತವೆ. ನಿಮ್ಮ ನಿಲುವಿನ ಬಗ್ಗೆ ನಿಮಗೇ ಗೊಂದಲ.
ಮಿಥುನ
ಎಂದಿನಂತಹ ಸಾಮಾನ್ಯ ದಿನ. ವಿಶೇಷವೇನೂ ಘಟಿಸದು. ಎಲ್ಲವೂ ನೀರಸವೆಂಬ ಭಾವನೆ ಉದಿಸಬಹುದು. ಇದ್ದುದರಲ್ಲಿ ಕುಷಿ ಪಡಲು ಕಲಿಯಿರಿ.
ಕಟಕ
ನಿಮ್ಮ ಆತ್ಮೀಯರು ನಿಮ್ಮಿಂದ ನೆರವು ಬಯಸುತ್ತಾರೆ. ನಿಮಗೆ ಸಾಧ್ಯವಾದ ನೆರವು ನೀಡುವುದು ಅವಶ್ಯ. ವ್ಯಕ್ತಿಯೊಬ್ಬರು ನಿಮ್ಮ ಭಾವನೆ ಕೆರಳಿಸುತ್ತಾರೆ.
ಸಿಂಹ
ದೂರ ಸರಿದವರು ಹತ್ತಿರವಾಗುವರು. ಕೆಲಸ ಸಫಲವಾಗಲು ಕಠಿಣ ಶ್ರಮ ಪಡಬೇಕಾಗಿಲ್ಲ. ಎಲ್ಲವೂ ಸುಗಮವಾಗಿ ನಿಮ್ಮಿಷ್ಟದಂತೆ ಆಗುವುದು.
ಕನ್ಯಾ
ಯಾರನ್ನಾದರೂ ದೂರ ಮಾಡಿದ್ದರೆ ಅವರೊಡನೆ ಮತ್ತೆ ಮಾತುಕತೆ ನಡೆಸಿ. ಅವರ ಭಾವನೆಯನ್ನು ಅರ್ಥೈಸಿಕೊಳ್ಳಿ. ಏಕಾಂಗಿತನ ಬಿಟ್ಟು ಅನ್ಯರ ಜತೆ ಬೆರೆಯಿರಿ.
ತುಲಾ
ಹಣದ ವಿಚಾರದಲ್ಲಿ ಗೊಂದಲ ಬಿಟ್ಟುಬಿಡಿ. ಎಲ್ಲರನ್ನೂ ಅತಿಯಾಗಿ ನಂಬಬೇಡಿ. ಸಂಗಾತಿ ಜತೆಗಿನ ಭಿನ್ನಮತ ನಿವಾರಣೆ, ಸೌಹಾರ್ದ ಪರಿಹಾರ.
ವೃಶ್ಚಿಕ
ಹೆಚ್ಚು ಜನರೊಂದಿಗೆ ಬೆರೆಯುವ ಮನಸ್ಸು ಮಾಡಿ. ಯಾರೊಂದಿಗೂ ಸಂಬಂಧ ಬೇಡ ಎಂಬಂತಹ ಮನಸ್ಥಿತಿ ಬಿಟ್ಟುಬಿಡಿ. ಹಣ ಹೂಡಿಕೆಯಲ್ಲಿ ಲಾಭ.
ಧನು
ವೃತ್ತಿಪರರಿಗೆ ಯಶಸ್ವಿ ದಿನ. ಸಮಸ್ಯೆ ನಿವಾರಣೆ. ಆರ್ಥಿಕ ಸ್ಥಿತಿ ಸುಧಾರಣೆ. ಬಂಧುಗಳ ಜತೆಗಿನ ವೈಷಮ್ಯ ಪರಿಹಾರ, ಸೌಹಾರ್ದತೆ ನೆಲೆಸುವುದು.
ಮಕರ
ಎಲ್ಲರೂ ನಿಮ್ಮೊಂದಿಗೆ ತಮ್ಮ ಸಮಸ್ಯೆ ಹೇಳಿಕೊಂಡು ಬರುತ್ತಾರೆ. ಅವರ ಭಾವನೆ ನೋಯಿಸದಿರಿ. ಪ್ರಾಮಾಣಿಕವಾಗಿ ವ್ಯವಹರಿಸಿ.
ಕುಂಭ
ಆಪ್ತರೊಬ್ಬರು ನಿಮ್ಮನ್ನು ಕಡೆಗಣಿಸುತ್ತಿರುವ ನೋವು ಕಾಡುತ್ತದೆ. ನಿಮ್ಮ ಆದ್ಯತಾ ಕ್ಷೇತ್ರವನ್ನು ಬದಲಿಸಬೇಕಾದ ಅಗತ್ಯವಿದೆ. ಶೇರು ಹೂಡಿಕೆಯಲ್ಲಿ ಲಾಭ.
ಮೀನ
ಆತ್ಮೀಯರ ಜತೆ ಕಾಲ ಕಳೆಯುವ ಅವಕಾಶ. ಭಾವನೆ ನಿಯಂತ್ರಿಸಲು ಯತ್ನಿಸಬೇಡಿ. ಕೆಲವು ಭಾವಗಳು ಹರಿದು ಹೋಗಲು ಅವಕಾಶ ನೀಡುವುದೊಳಿತು.