ಮೇಷ
ಬಾಕಿ ಉಳಿದ ಕೆಲಸ ಇಂದು ಪೂರೈಸಲು ಸಫಲರಾಗುವಿರಿ. ಸೂಕ್ತ ನೆರವೂ ಒದಗುವುದು. ವೃತ್ತಿಯ ಗುರಿ ಸಾಧನೆ. ಪ್ರೀತಿಪಾತ್ರರಿಂದ ಶುಭ ಸುದ್ದಿ ಕೇಳಬಹುದು.
ವೃಷಭ
ಸ್ವಂತವಾಗಿ ನಿರ್ಧಾರ ತಾಳಬೇಕಾದ ಅನಿವಾರ್ಯತೆ. ಈ ದಿನ ಅಷ್ಟು ತೃಪ್ತ್ತಿಕರವಲ್ಲ. ಆರ್ಥಿಕ ವಿಚಾರದಲ್ಲಿ ನಿರಾಶೆ. ಶೇರು ವ್ಯವಹಾರದಲ್ಲಿ ಹಿನ್ನಡೆ.
ಮಿಥುನ
ವೃತ್ತಿ ಬದಲಾವಣೆಗೆ ಯೋಜಿಸಿದ್ದರೆ ನಿಮಗೆ ಪೂರಕ ಬೆಳವಣಿಗೆ. ಪ್ರೀತಿಪಾತ್ರರ ಜತೆ ಕಾಲಕ್ಷೇಪ. ಸ್ವಂತ ಉದ್ದಿಮೆದಾರರಿಗೆ ಆರ್ಥಿಕ ಲಾಭ.
ಕಟಕ
ಹಳೆಯ ನಿರಾಶೆ ಬಿಟ್ಟುಬಿಡಿ. ನಿಮ್ಮ ಪ್ರಸಕ್ತ ಕ್ರಮಗಳು ಉತ್ತಮ ಆರ್ಥಿಕ ಲಾಭ ತಂದುಕೊಡುತ್ತವೆ. ವೃತ್ತಿಯಲ್ಲೂ ಖಾಸಗಿ ಬದುಕಲ್ಲೂ ತೃಪ್ತಿ.
ಸಿಂಹ
ಕ್ಲಿಷ್ಟಕರ ದಿನ. ಮನಸು ಗೊಂದಲದ ಗೂಡು. ಅನ್ಯರ ಜತೆ ಸಂಘರ್ಷ ನಡೆದೀತು. ಸಹನೆ ಕಾಯ್ದುಕೊಳ್ಳುವುದು ಅವಶ್ಯ. ಆರೋಗ್ಯ ಸ್ಥಿತಿ ಸುಧಾರಣೆ.
ಕನ್ಯಾ
ನಡೆನುಡಿಯಲ್ಲಿ ವಿನಯವಿರಲಿ. ಇಲ್ಲವಾದರೆ ಇಂದು ಜಗಳದಲ್ಲಿ ಸಿಕ್ಕಿ ಬೀಳುವಿರಿ. ಗುರಿಯಿಂದ ವಿಚಲಿತರಾಗದಿರಿ. ಆರೋಗ್ಯ ಸಮಸ್ಯೆ.
ತುಲಾ
ಪ್ರೇಮದ ವಿಚಾರದಲ್ಲಿ ನಿಮಗೆ ಅನುಕೂಲಕರ ಬೆಳವಣಿಗೆ. ಹೊಸ ವ್ಯವಹಾರದಲ್ಲಿ ಹಣ ಹೂಡಲು ಕಾಲ ಪ್ರಶಸ್ತ. ಕೌಟುಂಬಿಕ ಸಮಸ್ಯೆ ಪರಿಹಾರ, ನಿರಾಳತೆ.
ವೃಶ್ಚಿಕ
ವೃತ್ತಿಯಲ್ಲಿ ಉನ್ನತಿ. ಗೊಂದಲಗಳ ನಿವಾರಣೆ. ಬಾಕಿ ಉಳಿದಿದ್ದ ಕಾರ್ಯ ಸಂಪೂರ್ಣ. ಮನೆಯಲ್ಲಿ ತಾಳಮೇಳ ಸರಿಯಿಲ್ಲದೆ ಸಮಸ್ಯೆ ಉಂಟಾದೀತು ಸಹನೆ ಅವಶ್ಯ.
ಧನು
ಹಳೆ ಸ್ನೇಹಿತರ ನೆನಪು ಕಾಡಬಹುದು. ಯುವಜನರಿಗೆ ಪ್ರೀತಿಯ ಭಾವ ಉಂಟಾದೀತು. ನಿಮ್ಮದೇ ಲೋಕದಲ್ಲಿ ವಿಹರಿಸುವ ಸಾಧ್ಯತೆ ಹೆಚ್ಚು.
ಮಕರ
ನಿಮ್ಮ ಸಿಡುಕು ಸ್ವಭಾವ ವೃತ್ತಿಯ ಮೇಲೆ ಮತ್ತು ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ನಡೆನುಡಿಯ ಮೇಲೆ ನಿಯಂತ್ರಣ ಹೇರುವುದು ಒಳಿತು.
ಕುಂಭ
ಕೆಲಸದ ಒತ್ತಡ ಕಡಿಮೆ. ನಿರಾಳವಾಗಿ ದಿನ ಕಳೆಯುವ ಅವಕಾಶ. ಆತ್ಮೀಯರನ್ನು ಭೇಟಿ ಆಗಲು ಸಮಯ ಉಪಯೋಗಿಸಿ. ಕೌಟುಂಬಿಕ ನೆಮ್ಮದಿ.
ಮೀನ
ಖಾಸಗಿ ಬದುಕಲ್ಲಿ ಹರ್ಷ. ಬಹುಕಾಲದ ಬಯಕೆಯೊಂದು ನೆರವೇರುವುದು. ಚರ್ಮ ಅಥವಾ ಕಣ್ಣಿಗೆ ಸಂಬಂಧಿಸಿ ಅಲರ್ಜಿ ಉಂಟಾದೀತು.