ದಿನಭವಿಷ್ಯ: ಗ್ರಹಗಳ ಸ್ಥಾನ ಬದಲಾವಣೆ, ಯಾವ ರಾಶಿಗೆ ಶುಭ?

ಮೇಷ
ಮನಸ್ಸಿಗೆ ನೆಮ್ಮದಿ ತರುವಂತಹ ಬೆಳವಣಿಗೆ. ಕೆಲದಿನಗಳ ಚಿಂತೆ ನಿವಾರಣೆ. ಆಪ್ತರ ಜತೆಗಿನ ವೈಮನಸ್ಸು ಪರಿಹಾರ. ಕೌಟುಂಬಿಕ ಸಹಕಾರ.

ವೃಷಭ
ನ್ಯಾಯವಾದ ವಿಷಯ ಬೆಂಬಲಿಸಲು ಹಿಂಜರಿಕೆ ತೋರದಿರಿ. ಇದರಿಂದ ಕೆಲವರ ವಿರೋಧ ಕಟ್ಟಿಕೊಳ್ಳುವ ಸಾಧ್ಯತೆಯಿದೆ. ಆ ಬಗ್ಗೆ ಚಿಂತಿಸದಿರಿ. ದೃಢವಾಗಿರಿ.

ಮಿಥುನ
ಕುಟುಂಬಸ್ಥರ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ. ಸಣ್ಣಪುಟ್ಟ ಭಿನ್ನಮತ ಉಂಟಾದರೂ ಒಟ್ಟಿನಲ್ಲಿ ನೆಮ್ಮದಿಯ ದಿನ. ಆರ್ಥಿಕ ಉನ್ನತಿ. ಖರ್ಚು ಸೀಮಿತ.

ಕಟಕ
ಆತ್ಮಸಂತೃಪ್ತಿ ಮತ್ತು ಜನಪ್ರಿಯತೆ ಎರಡೂ ನಿಮಗಾಗುವುದು.  ಕೆಲಸದಲ್ಲಿ  ನೀವು ಬಯಸಿದ ಸಾಧನೆ ತೋರುವಿರಿ. ಎಲ್ಲರಿಂದ ಮೆಚ್ಚುಗೆ.

ಸಿಂಹ
ಇಂದು  ತಾಳ್ಮೆಯಿಂದ ವರ್ತಿಸಿದರೆ
ಕಠಿಣ ಕೆಲಸವನ್ನೂ ಪೂರೈಸಬಲ್ಲಿರಿ. ಇತರರ ಪ್ರಭಾವಕ್ಕೆ ಸಿಲುಕದೆ ನಿಮ್ಮದೇ ಸ್ವಂತ ನಿರ್ಧಾರ ತಾಳಿ.

ಕನ್ಯಾ
ನಿಮ್ಮ ವ್ಯವಹಾರದಲ್ಲಿ ಹಠಾತ್ ತಿರುವು ಸಂಭವಿಸಬಹುದು. ಆರ್ಥಿಕ ಪರಿಸ್ಥಿತಿ ನಿಮಗೆ ಅನುಕೂಲಕರ ಆಗುವುದು. ಬಂಧುಗಳ ಸಹಕಾರ.

ತುಲಾ
ಮನೆಯಲ್ಲಿ ನಿಮ್ಮ ಹೊಣೆಗಾರಿಕೆ ನಿಭಾಯಿಸುವಲ್ಲಿ ಸಮಸ್ಯೆ ಎದುರಿಸುವಿರಿ. ಇದರಿಂದ ಇತರರ ಟೀಕೆಗೆ ಗುರಿಯಾಗುವಿರಿ.

ವೃಶ್ಚಿಕ
ಇಂದು ವ್ಯವಹಾರದಲ್ಲಿ ಲಾಭ. ಖರ್ಚು ಮಾಡಲು ಯಾವುದೇ ಅಡ್ಡಿ ಇಲ್ಲ. ಕುಟುಂಬ ಸದಸ್ಯರಲ್ಲಿ ಮೂಡಿದ್ದ ಅಸಮಾಧಾನ ನಿವಾರಣೆ, ಸಂತೃಪ್ತಿ.

ಧನು
ನಿಮ್ಮ ತಾಳ್ಮೆ ಕೆಡಿಸುವ  ಪ್ರಸಂಗ ಉಂಟಾದೀತು. ಮುಖ್ಯವಾಗಿ ಆಪ್ತ ಸಂಬಂಧದ ವಿಚಾರ ದಲ್ಲಿ  ಪ್ರತಿಕೂಲ ಬೆಳವಣಿಗೆ. ಜಗಳದಿಂದ ದೂರವಿರಿ.

ಮಕರ
ದೈಹಿಕ ನೋವು, ಸಮಸ್ಯೆ ಎದುರಿಸುವಿರಿ. ಅದಕ್ಕೆ ನಿಮ್ಮ  ಅತಿರೇಕದ ಭಾವನೆ ಕಾರಣವಾಗಿರ ಬಹುದು. ಇಂದು ಮನಸ್ಸು ಗೊಂದಲದ ಗೂಡಾಗಿರುವುದು.

ಕುಂಭ
ನಿಮಗೆ ಸಂಬಂಧಿಸಿದ ವಿಷಯವೊಂದು  ದ್ವಂದ್ವ ಹುಟ್ಟಿಸುವುದು.  ಯಾವ ದಾರಿ ಹಿಡಿಯಬೇಕೆಂದು ಅರಿಯದೆ ಗೊಂದಲ. ಮನಸ್ಸಿಗೆ ಕಿರಿಕಿರಿ.

ಮೀನ
ಕೆಲ ವಿಷಯಗಳಲ್ಲಿ ತಕ್ಷಣದ ನಿರ್ಧಾರ ತಾಳಲು ಮನಸ್ಸನ್ನು ಸಿದ್ಧ ಪಡಿಸಬೇಕು. ಇಂದು ಅಂತಹ ಪ್ರಸಂಗ ಉಂಟಾದೀತು. ಇತರರ ನೆರವು ಪಡೆಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!