ದಿನಭವಿಷ್ಯ: ಇಂದು ಈ ರಾಶಿಯವರಿಗೆ ಲಕ್ಷ್ಮಿ ಕೃಪೆ, ಧನ ವೃದ್ಧಿ!

ಮೇಷ
ಬಾಕಿ ಇರುವ ಕೆಲಸ ಮುಗಿಸಲು ಆದ್ಯತೆ ಕೊಡಿ. ಇತರರ ಸಹಕಾರ ಪಡೆಯಲು ಹಿಂಜರಿಯದಿರಿ. ಕೌಟುಂಬಿಕ ಹೊಣೆ ಹೆಚ್ಚುವುದು.

ವೃಷಭ
ಧಾರ್ಮಿಕ ವಿಚಾರಗಳು ಇಂದು ನಿಮ್ಮನ್ನು ಹೆಚ್ಚು ಆಕರ್ಷಿಸುತ್ತವೆ. ಸಹೋದ್ಯೋಗಿಗೆ ನೆರವು ನೀಡಬೇಕಾದ ಪ್ರಸಂಗ ಬರುವುದು. ಆರ್ಥಿಕ ಒತ್ತಡ.

ಮಿಥುನ
ಒತ್ತಡ ಹೆಚ್ಚಿಸುವ ಪರಿಸ್ಥಿತಿಯಿಂದ ದೂರವಿರಿ. ವಾಗ್ವಾದಕ್ಕೆ ಇಳಿಯಬೇಡಿ. ಆರ್ಥಿಕ ಬಿಕ್ಕಟ್ಟು ಕಾಡಬಹುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲ.

ಕಟಕ
ವೃತ್ತಿಯಲ್ಲಿ ಹೆಚ್ಚು ಒತ್ತಡ. ಇತರರ ಕಾರ್ಯದ ಒತ್ತಡ ನಿಮ್ಮ ಮೇಲೆ ಬೀಳಬಹುದು. ನಿಮ್ಮ ಕೋಪತಾಪದ ಮೇಲೆ ನಿಯಂತ್ರಣವಿಡಿ. ಕೌಟುಂಬಿಕ ಉದ್ವಿಗ್ನತೆ.

ಸಿಂಹ
ವಿಭಿನ್ನ ಬಗೆಯ ಆಹಾರ ಸೇವನೆಯಿಂದ ಸಮಸ್ಯೆ ಎದುರಿಸುವಿರಿ. ಹಿತಮಿತ ಸಾಧಿಸಿ. ಕೆಲವರ ವರ್ತನೆ ನಿಮಗೆ ಅಸಹನೀಯ ಎನಿಸಬಹುದು.

ಕನ್ಯಾ
ಭಾವನಾತ್ಮಕ ಏರುಪೇರು ಅನುಭವಿಸುವಿರಿ. ಇದರಿಂದ ನಿಮ್ಮ ವೃತ್ತಿಯ ಮೇಲೂ ಪರಿಣಾಮ. ಆತ್ಮೀಯ ಸಂಬಂಧ ಕೆಡಲು ಆಸ್ಪದ ಕೊಡಬೇಡಿ.

ತುಲಾ
ಹಣಕಾಸು ವಿಚಾರದಲ್ಲಿ ರಿಸ್ಕ್ ತೆಗೆದುಕೊಳ್ಳಲು ಹಿಂಜರಿಕೆ ಬೇಡ. ಆದರೆ ತಜ್ಞರ ಸಲಹೆ ಪಡೆದು ಹೆಜ್ಜೆ ಮುಂದೆ ಇಡಿ. ವಿವಾಹಿತರಿಗೆ ಶುಭ ಬೆಳವಣಿಗೆ.

ವೃಶ್ಚಿಕ
ಕೌಟುಂಬಿಕ ಭಿನ್ನಮತ, ವಾಗ್ವಾದ ನಡೆದೀತು. ನಿಮ್ಮ ಮಾತುಗಳನ್ನು ಇತರರು ಒಪ್ಪಿಕೊಳ್ಳ ಲಾರರು. ಆರೋಗ್ಯದ ಕಡೆ ಗಮನ ಕೊಡಿ. ಆರ್ಥಿಕ ಕೊರತೆ.

ಧನು
ಬದಲಾವಣೆಗೆ ಅಂಜದಿರಿ. ಅದಕ್ಕೆ ಹೊಂದಿಕೊಳ್ಳಲು ಕಲಿಯಿರಿ. ಅದುವೇ ನಿಮಗೆ ಯುಕ್ತ ವಾದುದು. ಕೌಟುಂಬಿಕ ಸಹಕಾರ, ನೆಮ್ಮದಿ.

ಮಕರ
ಒತ್ತಡ ಮತ್ತು ಚಿಂತೆಯನ್ನು ಮರೆಯಲು ನಿಮ್ಮ ಮೆಚ್ಚಿನ ಹವ್ಯಾಸಕ್ಕೆ ಗಮನ ಕೊಡಿ. ಆಪ್ತರ ಸಂಗದಲ್ಲಿ ಒತ್ತಡ ಮರೆಯಬಹುದು.

ಕುಂಭ
ಅದೃಷ್ಟ ನಂಬಿ ಕೂರಬೇಡಿ. ನಿಮ್ಮ ಪ್ರಯತ್ನದಿಂದ ಮಾತ್ರ ಫಲ ಸಿಗುವುದು. ಕೆಲವು ಬೆಳವಣಿಗೆ ನಿಮ್ಮಲ್ಲಿ ಅಸಹನೆ ಮೂಡಿಸಬಹುದು.

ಮೀನ
ವೃತ್ತಿಕ್ಷೇತ್ರದಲ್ಲಿ ಎಂದಿಗಿಂತ ಹೆಚ್ಚು ಹೊಣೆಗಾರಿಕೆ. ಅದಕ್ಕಾಗಿ ಯೋಜನೆ ಹಾಕಿ ಕೊಳ್ಳಿ. ಕೆಲ ವಿಷಯಗಳು ಉತ್ಸಾಹ ಕುಂದಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!